ಶಿವಾಜಿ ಮಹಾರಾಜರ ರಾಷ್ಟ್ರ ಪ್ರೇಮ ನಮಗೆ ಆದರ್ಶ: ಡಿಸಿ ಗೀತಾ ಸಿ.ಡಿ

Ravi Talawar
ಶಿವಾಜಿ ಮಹಾರಾಜರ ರಾಷ್ಟ್ರ ಪ್ರೇಮ ನಮಗೆ ಆದರ್ಶ: ಡಿಸಿ ಗೀತಾ ಸಿ.ಡಿ
WhatsApp Group Join Now
Telegram Group Join Now
ಶಿವಾಜಿ ಮಹಾರಾಜರ ರಾಷ್ಟ್ರ ಪ್ರೇಮ, ದೇಶ ಭಕ್ತಿ ಮತ್ತು ಸ್ವಾಭಿಮಾನ, ಧೈರ್ಯದ ಗುಣಗಳು ನಮಗೆ ಆದರ್ಶವಾಗಬೇಕು:ಅಪರ ಜಿಲ್ಲಾಧಿಕಾರಿ ಗೀತಾ ಸಿ. ಡಿ.
ಧಾರವಾಡ :  ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಭಾರತೀಯರಿಗೂ  ಆದರ್ಶ ಮತ್ತು ಪ್ರೇರಣೆ ಆದವರು. ಅವರಲ್ಲಿನ ರಾಷ್ಟ್ರ ಪ್ರೇಮ, ದೇಶ ಭಕ್ತಿ ಮತ್ತು ಸ್ವಾಭಿಮಾನ, ಧೈರ್ಯದ ಗುಣಗಳನ್ನು ನಮ್ಮ ಮಕ್ಕಳಲ್ಲಿಯೂ ಅಳವಡಿಸಿ, ಬೆಳಸಬೇಕೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ. ಡಿ. ಅವರು ಹೇಳಿದರು.
 ಮರಾಠ ವಿದ್ಯಾಪ್ರಸಾರಕ ಮಂಡಳದ ಭಾರತ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
 ಶಿವಾಜಿ ಮಹಾರಾಜರು ಕನ್ನಡ ಮತ್ತು ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಅವರು ಯುದ್ಧ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಯಾದವಾಡ ಗ್ರಾಮದವರೆಗೆ ಬಂದಿರುವ ಬಗ್ಗೆ ಇತಿಹಾಸದ ಪುರಾವೆಗಳಿವೆ. ಇಡೀ ಭಾರತದಲ್ಲಿ ಶಿವಾಜಿ ಮಹಾರಾಜರ ಮೊದಲ ಕಲ್ಲಿನ ಪ್ರತಿಮೆಯನ್ನು ಜಿಲ್ಲೆಯ ಯಾದವಾಡದಲ್ಲಿ ಸಂಶೋಧಿಸಲಾಗಿದೆ ಎಂದು ಅವರು ಹೇಳಿದರು.
ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಅವಲೋಕಿಸಿದಾಗ ಕರ್ನಾಟಕದೊಂದಿಗೆ ತಾಯಿ ಮಕ್ಕಳ ಸಂಬಂಧದಂತೆ ಕಾಣುತ್ತದೆ. ಕರ್ನಾಟಕದ ಮೇಲೆ ಶಿವಾಜಿ ಮಹಾರಾಜರ ಪ್ರಭಾವ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಶಂಕರ ಶಳಕೆ ಅವರು ಮಾತನಾಡಿ, ಶಿವಾಜಿ ಮಹಾರಾಜರ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನಮ್ಮ ಭಾರತದ ರಕ್ಷಣೆಯಾಗಿ ನಮ್ಮ ಹಿಂದೂ ಧರ್ಮದ ಏಕತೆಗಾಗಿ ಮತ್ತು ಉಳಿಯುವುದಕ್ಕೆ ಶಿವಾಜಿ ಮಹಾರಾಜರು ಮುಖ್ಯ ಕಾರಣರಾಗಿದ್ದಾರೆ. ನಾಡಿಗೆ ಮತ್ತು ರಾಷ್ಟ್ರಕ್ಕೆ  ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ಅವರು ಮಾತನಾಡಿ, ಶಿವಾಜಿ ಮಹಾರಾಜರು ದೇಶಕ್ಕೆ ಸೀಮಿತ. ಶಿವಾಜಿ ಮಹಾರಾಜರು ಯಾವುದೋ ಒಂದು ರಾಜ್ಯ ವಂಶಸ್ಥರಿಂದ ಬಂದು ರಾಜ್ಯವನ್ನು ಆಳಿದವರು ಅಲ್ಲ. ಸಾಮಾನ್ಯ ಮನುಷ್ಯನ ಹಾಗೆ ಈ ದೇಶವನ್ನು ಆಳಿ ದೇಶವನ್ನು ಸಂರಕ್ಷಣೆ ಮಾಡಿದವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನೀಯರ ಗಿರೀಶ ಪವಾರ ಅವರು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
 ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮರಾಠ ವಿದ್ಯಾ ಪ್ರಸಾರಕ ಮಂಡಳ ಅಧ್ಯಕ್ಷ ಮನೋಹರ ಎನ್.ಮೊರೆ, ಕಾರ್ಯಧ್ಯಕ್ಷ ಸುಭಾಸ ಯ. ಸಿಂಧೆ, ಉಪಾಧ್ಯಕ್ಷ ಯಲ್ಲಪ್ಪ ಭೀ. ಚವ್ಹಾಣ, ಕಾರ್ಯದರ್ಶಿ ರಾಜು ತಿ. ಬೀರಜೆನವರ, ಸಹ ಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಮಾಜದ ಮುಖಂಡ ಭೀಮಪ್ಪ ಖಸಾಯಿ ಹಾಗೂ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮುದಾಯದ ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article