ಹುಕ್ಕೇರಿ : ತಾಲೂಕಿಸ ಮದಮಕ್ಕನಾಳ ಗ್ರಾಮದ ಶ್ರೀ ಮಹಾಲಕ್ಷ್ಮೀ (ಥಳದವ್ವಾ) ದೇವಿ ಜಾತ್ರಾ ಮಹೋತ್ಸವವು ಗುರುವಾರ ದಿ 20 ರಿಂದ ಸೋಮವಾರ ದಿ.24 ವರೆಗೆ ಅತಿ ವಿಜೃಂಭಣೆಯಿಂದ ಜರುಗಲಿದೆ.
ಗುರುವಾರ ದಿ 20 ರಂದು ಮುಂಜಾನೆ 9.00 ಘಂಟೆಗೆ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಗಳಿಂದ ಧ್ವಜಾರೋಹಣ ಭಕ್ತಾದಿಗಳಿಂದ ಹಿರೆ ಹೋಳೆ (ಕೃಷ್ಣಾ ನದಿ) ಯಿಂದ ನೀರು ತರುವುದು ಹಾಗೂ ಸಂಜೆ 7-00 ಘಂಟೆಗೆ ಪಲ್ಲಕ್ಕಿ ಉತ್ಸವ ಜರುಗುವುದು ರಾತ್ರಿ 10 00 ಘಂಟೆಗೆ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಶುಕ್ರವಾರ ದಿ 21 ರಂದು. ಬೆಳಿಗ್ಗೆ 5-30 ರಿಂದ ದೇವಿಗೆ ಸೀರೆ ಏರಿಸುವದು ಮತ್ತು ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನ 2-30 ರಿಂದ ದೇವಿಯ ಮೂರ್ತಿಯನ್ನು ವಾದ್ಯಮೆಳದೊಂದಿಗೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ತಂದು ಮೂರ್ತಿ ಪ್ರತಿಷ್ಠಾಪನೆ ಮಾಡಿವುದು ಸಂಜೆ 4-00 ರಿಂದ ಊರಿನ ಭಕ್ತಾದಿಗಳಿಂದ ದಂಡವತ್ತ ಕಾಯ೯ಕ್ರಮ ರಾತ್ರಿ 8- 00 ಘಂಟೆಗೆ ದೇವಿಗೆ ನೈವೇದ್ಯ ಅರ್ಪಿಸುವುದು. ಇದೇ ದಿನ ಪೂಜ್ಯರು ಹಾಗೂ ಅತಿಥಿಗಳಾದ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಮಮದಾಪುರ ಶ್ರೀ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಯರಗಟ್ಟಿ ರಾಜ್ ರಾಜೇಶ್ವರಿ ಆಶ್ರಮದ ಶ್ರೀ ಗಣಪತಿ ಮಹಾರಾಜರು, ಶ್ರೀ ಅಭಿನವ ಮಂಜುನಾಥ ಮಹಾರಾಜರು, ಅವುಜೀಕರ ಆಶ್ರಮ ಕ್ಯಾರಗುಡ್ಡ ಹುಕ್ಕೇರಿ, ಬ್ರಹ್ಮಶ್ರೀ ಬಾಳಯ್ಯಾ ಸ್ವಾಮಿಗಳು ತವಗಮಠ, ಶಾಸಕ ನಿಖಿಲ್ ಉ ಕತ್ತಿ, ಮಾಜಿ ಸಂಸದರಾದ ರಮೇಶ ವ್ಹಿ ಕತ್ತಿ, ಸಂಸದೆ ಕು ಪ್ರಿಯಾಂಕಾ ಸ. ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆ.
ಶನಿವಾರ ದಿ 22 ರಂದು ದೇವಿ ಅಲಂಕಾರ ಶ್ರೀ ದೇವಿ ದಶ೯ನ ರಾತ್ರಿ 10-30 ಕ್ಕೆ ಅತ್ತಿಗೆಯೇ ನನ್ನ ಹೆತ್ತಮ್ಮ (ಅಥಾ೯ತ) ಮುತ್ತಿನಂಥ ಮೈದುನ ಎಂಬ ಸುಂದರ ಸಾಮಾಜಿಕ ನಾಟಕ ನಡೆಯಲಿವೆ, ಮುಖ್ಯ ಅತಿಥಿಗಳಾಗಿ ಧಾರವಾಡ ಪಿ ಎಸ್ ಐ ಶಂಕರ್ ಕೋಳಿ ಆಗಮಿಸಲಿದ್ದಾರೆ, ರವಿವಾರ ದಿ 23 ರಂದು ದೇವಿ ಅಲಂಕಾರ ದೇವಿ ದಶ೯ನ ಆನಂದ ಮೇಲೋಡಿಸ್ಬೆ. ಬೆಳಗಾವಿ ಇವರಿಂದ ಆಕೆ೯ಸ್ಟರಾ (ರಸಮಂಜರಿ ) ಕಾಯ೯ಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹುಕ್ಕೇರಿ ಸಿ ಪಿ ಐ ಮಹಾಂತೇಶ ಬಸ್ಸಾಪೂರೆ ಆಗಮಿಸುವರು.
ಸೋಮವಾರ ದಿ 24 ರಂದು ಸಂಜೆ 8-00 ಘಂಟೆಗೆ ಪಲ್ಲಕ್ಕಿ ಉತ್ಸವ ದೊಂದಿಗೆ ಜಾತ್ರೆ ಮುಕ್ತಾಯ ಗೋಳ್ಳುವುದು ಎಂದು ಜಾತ್ರಾ ಕಮಿಟಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.