ವಿದ್ಯಾಪತಿಯ ಮಲೈಕಾ ವಸುಪಾಲ್  ಝಲಕ್ 

Ravi Talawar
ವಿದ್ಯಾಪತಿಯ ಮಲೈಕಾ ವಸುಪಾಲ್  ಝಲಕ್ 
WhatsApp Group Join Now
Telegram Group Join Now
     ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಡವಟ್ಟು ರಾಣಿ ಲೀಲಾ ಆಗಿ ನಟಿಸಿ ಸೈ ಎನಿಸಿಕೊಂಡ ಬೆಡಗಿ ಮಲೈಕಾ ವಸುಪಾಲ್ ಉಪಾಧ್ಯಕ್ಷ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟಿದ್ದು ಗೊತ್ತೇ ಇದೆ. ಚಿಕ್ಕಣ್ಣನಿಗೆ ಜೋಡಿಯಾಗಿ ಮಿಂಚಿದ್ದ ಬ್ಯೂಟಿ ಈಗ ‘ವಿದ್ಯಾಪತಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
     ಮಲೈಕಾ ವಸುಪಾಲ್ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ವಿದ್ಯಾಪತಿ’ ಬಳಗದಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ‘ವಿದ್ಯಾಪತಿ’ ಸಿನಿಮಾದಲ್ಲಿ ಮಲೈಕಾ ಅವರ ಮೊದಲ ಝಲಕ್ ಅನಾವರಣ ಮಾಡಲಾಗಿದೆ. ಸಿನಿಮಾದಲ್ಲಿ ಸಿನಿಮಾ ನಾಯಕಿಯಾಗಿ ಮಲೈಕಾ ಅಭಿನಯಿಸುತ್ತಿದ್ದಾರೆ. ಅಂದರೆ ಸೂಪರ್ ಸ್ಟಾರ್ ವಿದ್ಯಾ ಪಾತ್ರದಲ್ಲಿ ಉಪಾಧ್ಯಕ್ಷ ಸುಂದರಿ ಬಣ್ಣ ಹಚ್ಚಿದ್ದಾರೆ.
ಕರಾಟೆ ಗೆಟಪ್ ತೊಟ್ಟಿರುವ ನಾಯಕ ನಾಗಭೂಷಣ್ ಗೆ ಮಲೈಕಾ ವಸುಪಾಲ್ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ನಾಗಭೂಷಣ್ ಎದುರು ಗರುಡ ರಾಮ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಕರಾಟೆ ಮಾಸ್ಟರ್ ಅವತಾರದಲ್ಲಿ ರಂಗಾಯಣ ರಘು ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.
     ಆಕ್ಷನ್, ಕಾಮಿಡಿ ಕತೆ ಹೊಂದಿರುವ ಈ ಚಿತ್ರವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಕೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆಕ್ಷನ್ ಚಿತ್ರಕ್ಕಿದೆ. ಡಾಲಿ ಪಿಕ್ಚರ್ಸ್ ಅವರ ಬಹುನಿರೀಕ್ಷಿತ ಸಿನಿಮಾವಾಗಿರುವ ‘ವಿದ್ಯಾಪತಿ’ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ.
WhatsApp Group Join Now
Telegram Group Join Now
Share This Article