ಬೆಳಗಾವಿ : ವಿಶ್ವ ವಿವಾಹ ವೇದಿಕೆ ನೇಕಾರ ಸಮುದಾಯಗಳ ವಧು-ವರರ ಮಾಹಿತಿ ಕೇಂದ್ರದ ವತಿಯಿಂದ ಫೆ.16 ಭಾನುವಾರ ರಂದು ಜಿಲ್ಲೆಯ ಹುಕ್ಕೇರಿ ತಾಲೂಕಿನ ಆನಂದಪುರ ಹತ್ತರಗಿಯಲ್ಲಿರುವ ಶ್ರೀ ಬನಶಂಕರಿ ಮಂಗಲ ಕಾರ್ಯಾಲಯದಲ್ಲಿ ಸಮಸ್ತ ನೇಕಾರ ಸಮುದಾಯಗಳ ವಧು-ವರರ ಮುಖಾಮುಖಿ ಮತ್ತು ಮಾಹಿತಿ ಸಂಗ್ರಹ ಕಾರ್ಯಾಗಾರ ಜರುಗಲಿದೆ.
ನೇಕಾರ ಸಮುದಾಯದಲ್ಲಿ ಬರುವ ದೇವಾಂಗ, ಪದ್ಮಶಾಲಿ, ಕುರುಹಿನಶೆಟ್ಟಿ, ತೊಗಟಿವೀರ, ಪಟ್ಟಸಾಲಿ, ಸ್ವಕುಲಸಾಲಿ, ಪಟಗಾರ, ಶಿವಾಚಾರ, ಶೆಟ್ಟಿಗಾರ, ಜೇಡರ, ಕೋಷ್ಠಿ, ಶಿವಸಮಸಾಲಿ, ಸೈಗುಂದರ್ ಸಾಮಜದ ಒಳಪಂಗಡಗಳ ಕುಲಬಾಂಧವರು ಭಾಷಾ-ಭೇದವಿಲ್ಲದೇ ವಧು-ವರರ ಸಮಾವೇಶದಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9606601848 ಸಂಪರ್ಕಿಸಬಹುದು ಎಂದು ಆಯೋಜಕ ರಾಮಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.