ಮಕ್ಕಳನ್ನು ಮಾಡೆಲ್​ಗಳಂತೆ ಪ್ರದರ್ಶನಕ್ಕಿಡಬೇಡಿ: ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ

Ravi Talawar
ಮಕ್ಕಳನ್ನು ಮಾಡೆಲ್​ಗಳಂತೆ ಪ್ರದರ್ಶನಕ್ಕಿಡಬೇಡಿ: ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ
WhatsApp Group Join Now
Telegram Group Join Now

ಮಕ್ಕಳನ್ನು ಮಾಡೆಲ್​ಗಳಂತೆ ಪ್ರದರ್ಶನಕ್ಕಿಡಬೇಡಿ ಎಂದು ಪೋಷಕರಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಪೋಷಕರು ಬೇರೆಯ ಮಕ್ಕಳನ್ನು ನೋಡಿ ತಮ್ಮ ಮಕ್ಕಳು ಹೀಗೆಯೇ ಇರಬೇಕು, ಬೇರೆಯವರ ಮನೆಯ ಮಕ್ಕಳಂತೆಯೇ ಓದಬೇಕೆಂದು ಬಯಸಬೇಡಿ. ನಿಮ್ಮ ಮಕ್ಕಳಿಗೆ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೋ ಅದೇ ವಿಚಾರಗಳನ್ನು ಓದಲು ಅನುವು ಮಾಡಿಕೊಡಿ ಎಂದಿದ್ದಾರೆ.

ಮಕ್ಕಳು ಕೂಡ ತಮ್ಮ ಆಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದುಯ ಬೇಡ, ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಿ, ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ಪ್ರತಿಯೊಂದು ಮಕ್ಕಳು ಒಂದಲ್ಲಾ ಒಂದು ಕ್ಷೇತ್ರದಲ್ಲಿ ಉತ್ತಮವಾಗಿರುತ್ತಾರೆ ಎಂದರು.

ನೀವು ಪ್ರಧಾನಿಯಾಗಿರದಿದ್ದರೆ ಮತ್ತು ಸಚಿವರಾಗಿದ್ದರೆ ನೀವು ಯಾವ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಿರಿ ಎಂದು. ಇದಕ್ಕೆ ಪ್ರಧಾನಿಯವರು, ಕೌಶಲ್ಯ ಬಹಳ ಮುಖ್ಯವಾದ ಕಾರಣ ನಾನು ಕೌಶಲ್ಯ ವಿಭಾಗವನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದರು. ಪೋಷಕರು ಸಹ ತಮ್ಮ ಮಕ್ಕಳ ಕೌಶಲ್ಯಗಳ ಬಗ್ಗೆ ಗಮನ ಹರಿಸಬೇಕು. ಮಕ್ಕಳು ದುಃಖಿತರಾದರೆ ಮತ್ತು ದಣಿದಿದ್ದರೆ ಪರೀಕ್ಷೆಗಳಲ್ಲಿ ಉತ್ತಮವಾಗಿ ಬರೆಯಲು ಸಾಧ್ಯವಾಗುತ್ತದೆಯೇ? ಎಂದು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article