ಧಾರವಾಡ : ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಆರೋಪಿ ವಿಜಯ ಎಂಬುವವನು ಇವತ್ತು ಪೊಲೀಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಮೇಲೆ ಏರಿ ಕುಳಿತ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.
ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ವಿಜಯ್ ಎಂಬ ಯುವಕ ಮೂರು ದಿನದ ಹಿಂದೆ ಬಂದನವಾಗಿದ್ದ. ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಈತನ ಮೇಲೆ ಬಾಡಿ ವಾರಂಟ್ ಆಗಿತ್ತು. ಹೀಗಾಗಿ ಇವತ್ತು ಬಾಡಿ ವಾರೆಂಟ ಮೇಲೆ ವಿಜಯನಿಗೆ ಬಂಧಿಸಿ ನ್ಯಾಯಾದೀಶರ ಮುಂದೆ ಹಾಜರು ಪಡಿಸಲು ಅಣ್ಣೀಗೆರಿ ಪೋಲಿಸರು ಧಾರವಾಡಕ್ಕೆ ಕರೆ ತಂದಾಗ ಈತ ಪೋಲಿಸರಿಂದ ತಪ್ಪಿಸಿಕೊಂಡು ಬಿಲ್ಡಿಂಗ್ ಏರಿದ್ದಾನೆ.
ನನಗೆ ನ್ಯಾಯಾ ಬೇಕೆಂದು ಹಠ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತಿದ್ದ ಇವನು, ನ್ಯಾಯಾಧೀಶರು ಸ್ಥಳಕ್ಕೆ ಬಂದರೆ ಮಾತ್ರ ನಾನು ಕೆಳಗೆ ಇಳಿಯುತ್ತೆನೆ ಎಂದಿದ್ದಾನೆ. ಕೊನೆಗೆ ಬಿಲ್ಡಿಂಗ್ ಪಕ್ಕದಲ್ಲಿ ಇದ್ದ ಕನಾ೯ಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ. ವಿಶ್ವನಾಥ ಚಿಂತಾಮಣಿ ಎಂಬುವವರಿಗೆ ಪೊಲೀಸರು ನ್ಯಾಯಾಧೀಶರು ಎಂದು ಯುವಕನ ಕಡೆ ಕರೆದುಕೊಂಡು ಹೋಗಿ ಕೆಳಗೆ ಇಳಿಸಿದ್ದಾರೆ.
ಈ ವೇಳೆನಾನು ಯಾವುದೇ ತಪ್ಪು ಮಾಡಿಲ್ಲಾ ಎಂದು ಪೋಲಿಸರ ಮೇಲೆ ಹಲವಾರು ಆರೋಪ ಮಾಡಿದ್ದಾನೆ. ಸದ್ಯ ಈತ ಕೆಳಗೆ ಇಳಿದು ಬರುತ್ತಿದ್ದಂತೆಯೇ ಮತ್ತೇ ಅಣ್ಣಿಗೇರಿ ಪೋಲಿಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.