ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 205 ಜನರು ಭಾರತಕ್ಕೆ

Ravi Talawar
ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 205 ಜನರು ಭಾರತಕ್ಕೆ
WhatsApp Group Join Now
Telegram Group Join Now

ಅಮೃತ್​ಸರ: ಅಕ್ರಮ ವಲಸಿಗರ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕಠಿಣ ಕ್ರಮ ತೆಗದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡುತ್ತಿದ್ದಾರೆ. ಅದರಂತೆ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 205 ಜನರು ಭಾರತಕ್ಕೆ ಮರಳುತ್ತಿದ್ದಾರೆ. ಇವರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಸಿ- 17 ಅಮೃತ್​​ಸರ್​ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ.

ಮಂಗಳವಾರ ಮಧ್ಯಾಹ್ನ ಸ್ಯಾನ್ ಆಂಟೋನಿಯೊದಿಂದ ಹೊರಟಿರುವ ವಿಮಾನ ಇಂದು ಅಮೃತಸರದ ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಅಮೆರಿಕದಿಂದ ವಿಮಾನ ಹೊರಡುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅಮೃತ್​ಸರದಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ಮೊದಲು ಇಂದು ಬೆಳಗ್ಗೆ 9ಕ್ಕೆ ವಿಮಾನ ಬಂದಿಳಿಯಲಿದೆ ಎನ್ನಲಾಗಿತ್ತು. ಇದೀಗ ವಿಮಾನ ಮಧ್ಯಾಹ್ನ 1ಕ್ಕೆ ಲ್ಯಾಂಡ್​ ಆಗಲಿದೆ ಎಂದು ತಿಳಿಸಲಾಗಿದೆ.

205 ಭಾರತೀಯರನ್ನು ಹೊತ್ತ ವಿಮಾನ: ಅಮೆರಿಕದಿಂದ ಭಾರತೀಯರನ್ನು ಹೊತ್ತ ವಿಮಾನ ಹೊರಡುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅವರ ಸಂಬಂಧಿಕರು ವಿಮಾನ ನಿಲ್ದಾಣದತ್ತ ಮುಖ ಮಾಡಿದ್ದಾರೆ. ವಿಮಾನದಲ್ಲಿ 11 ಮಂದಿ ಸಿಬ್ಬಂದಿ ಹಾಗೂ 45 ಅಮೆರಿಕನ್​ ಅಧಿಕಾರಿಗಳು ಇದ್ದಾರೆ. ಇವರು 205 ಭಾರತೀಯರನ್ನು ಅಮೃತ್​ಸರ ವಿಮಾನ ನಿಲ್ದಾಣದಲ್ಲಿ ಇಳಿಸಿದ ಬಳಿಕ ವಾಪಸ್​ ಆಗಲಿದೆ. ಈ 205 ಮಂದಿಯಲ್ಲಿ ಪಂಜಾಬ್​ ಹೊರತಾದ ಇತರ ರಾಜ್ಯದ ಭಾರತೀಯರು ಇದ್ದಾರೆ. ಇವರ ಆಗಮನ ಹಿನ್ನಲೆ ವಿಮಾನ ನಿಲ್ದಾಣದಲ್ಲಿ ಭಾರತೀಯ ಭದ್ರತಾ ಏಜೆನ್ಸಿಗಳನ್ನು ಕೂಡ ಸೇವೆಗೆ ನಿಯೋಜಿಸಲಾಗಿದೆ.

ಹಿನ್ನೆಲೆ ಪರೀಕ್ಷಿಸಲಿರುವ ಏಜೆನ್ಸಿ: ಲಭ್ಯವಾದ ಮೂಲಗಳ ಪ್ರಕಾರ, ಅಮೆರಿಕದಿಂದ ಅಮೃತ್​ಸರ್​​ಗೆ ಬರುತ್ತಿರುವ ಎಲ್ಲ ಜನರ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಇಮಿಗ್ರೇಷನ್​ ಹೊರತಾಗಿ ಅವರ ಸಂಪೂರ್ಣ ಹಿನ್ನೆಲೆ ಅದರಲ್ಲೂ ವಿಶೇಷವಾಗಿ ಕ್ರಿಮಿನಲ್​ ರೆಕಾರ್ಡ್​ ಪರೀಕ್ಷೆ ನಡೆಸಲಾಗುವುದು. ಯಾರಾದರೂ ಕ್ರಿಮಿನಲ್​ ಹಿನ್ನೆಲೆ ಹೊಂದಿದ್ದರೆ, ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗುವುದು. ಮಾಹಿತಿ ಪ್ರಕಾರ, ಅಮೆರಿಕದಿಂದ ಗಡಿಪಾರಾಗಿರುವ ಭಾರತೀಯರಲ್ಲಿ ಭಾರತದಲ್ಲಿ ಅಪರಾಧ ಕೃತ್ಯ ಎಸಗಿ ಅಮೆರಿಕಕ್ಕೆ ಹೋಗಿರುವವರು ಇರಬಹುದು ಎನ್ನಲಾಗಿದೆ.

WhatsApp Group Join Now
Telegram Group Join Now
Share This Article