ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ ನಡುವೆ ಕಸರತ್ತು ಜೋರಾಗಿ ನಡೆದಿರುವ ಬೆನ್ನಲ್ಲೇ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಬಾಲ್ಯದ ಗೆಳೆಯನ ಅಂಗಡಿಗೆ ತಮ್ಮ ಪುತ್ರ ರಾಹುಲ್ ಜಾರಕಿಹೊಳಿ ಜೊತೆಗೆ ಭೇಟಿ ಕೊಟ್ಟಿದ್ದಾರೆ.
ಹೌದು…ಕರದಂಟು ನಾಡಿನ ಆನಂದ ಚಿತ್ರ ಮಂದಿರದ ಬಳಿರೋ ತಮ್ಮ ಗೆಳೆಯನಾದ ಕಿಫಾಯತ್‌ನ ಟಿವ್ಹಿ-ರೆಡಿಯೋ ಅಂಗಡಿಗೆ ಭೇಟಿ ನೀಡಿ ಕೆಲಹೊತ್ತು ಅಲ್ಲೇ ಕುಳಿತು ಹಳೆಯ ಕನ್ನಡ ಹಾಗೂ ಹಿಂದಿಯ ಹಾಡುಗಳನ್ನು ಕೇಳಿ ತಮ್ಮ ಬಾಲ್ಯದ ಗೆಳೆತನ ಹಾಗೂ ಹಳೆಯ ಆದಿನಗಳನ್ನ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ.
ಬಾಲ್ಯದ ಗೆಳೆತನ ಮರೆಯದ ಸಾಹುಕಾರ್: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಹಂತ ಹಂತವಾಗಿ ಮುಗಿಲ ಎತ್ತರಕ್ಕೆ ಬೆಳೆಯುತ್ತಿರೋ ಪ್ರಭಾವಿ ಲೀಡರ್. ಇಂತಹ ಲೀಡರ್ ಎಷ್ಟೆ ಕೆಲಸದ ಒತ್ತಡ ನಡುವೆಯೂ ಆಗಾಗ ಸ್ನೇಹಿತರಿಗೂ ಸಮಯ ಕೊಡುವ ಮೂಲಕ, ಅವರೊಂದಿಗೆ ಬೇರೆತು ಕೆಲ ಹೊತ್ತು ಬಾಲ್ಯದ ಗೆಳೆತನ ಮೆಲಕು ಹಾಕುವ ಮೂಲಕ ಗೆಳೆತನದ ಮಹತ್ವವನ್ನ ಬಿಚ್ಚಿಟ್ಟಿದ್ದಾರೆ. ಯಾಕೆಂದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರಚಾರಕ್ಕಾಗಿ ಸ್ಟಂಟ್ ಮಾಡೋ ನಾಯಕರ ಮಧ್ಯೆ ಅಸಲಿ ಲೀಡರ್ ಅನ್ನೋದಕ್ಕೆ ಸತೀಶ್ ಜಾರಕಿಹೊಳಿ ಸಾಕ್ಷಿಯಾಗಿದ್ದಾರೆ.
ಸಿಎಂ ರೇಸ್ ನಲ್ಲಿರೋ ಏಕೈಕ ಅಹಿಂದ ಪ್ರಭಲ ನಾಯಕ ಸತೀಶ್: ರಾಜ್ಯದ ಮುಖ್ಯಮಂತ್ರಿ ರೇಸ್ ನಲ್ಲಿರೋ ಏಕೈಕ ಅಹಿಂದ ಪ್ರಭಲ ನಾಯಕ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಹಂತ ಹಂತವಾಗಿ ಮುಗಿಲ ಎತ್ತರಕ್ಕೆ ಬೆಳೆಯುತ್ತಿರೋ ಪ್ರಭಾವಿ ಲೀಡರ್. ಈಗ ರಾಜ್ಯದಲ್ಲಿ ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಮುನ್ನಲೇಗೆ ಬಂದಾಗ ಉತ್ತರ ಕರ್ನಾಟಕದಿಂದ ಕೇಳಿ ಬರೋ ಏಕೈಕ ಹೆಸರು ಸತೀಶ್ ಜಾರಕಿಹೊಳಿ ಅವರದ್ದಾಗಿದೆ. ಅಲ್ಲದೇ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಇರೋ ಕಾರ್ಯದೊತ್ತಡ ಮತ್ತು ಅವರ ಜವಾಬ್ದಾರಿಗಳ ಹೊಣೆಗಾರಿಕೆ ಮಧ್ಯೆ ತಮ್ಮ ಕುಟುಂಬ, ಉದ್ಯಮ, ಕಾರ್ಯಕರ್ತರು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಪ್ರೋತ್ಸಾಹ ಕೆಲಸ ಕಾರ್ಯಗಳನ್ನ ಸದ್ದಿಲ್ಲದೆ ಮಾಡುತ್ತಿರುವುದು ಅವರದ್ದು ಇನ್ನೋಂದು ವಿಶೇಷವಾಗಿದೆ.