ಗುರ್ಲಾಪುರ : ಭಕ್ತೆಗೆ ತನ್ನಿರುವಿಕೆ ತೋರಿದ ಕಲಿಯುಗದ ಕಾಮದೇನು ಗುರುರಾಘವೇಂದ್ರ ಶ್ರೀಗಳ ಮುಂದೆ ಹಚ್ಚಿಟ್ಟಿದ್ದ ದೀಪ ಮುಂದೆ ಬಂದಿರುವ ಘಟನೆ ಮಂಗಳವಾರದಂದು ಜರುಗಿದೆ.
ಮೂಡಲಗಿ ಸಮೀಪದ ಗುರ್ಲಾಪೂರ ಗ್ರಾಮದ ಬಡಿಗೇರ ಓಣಿಯ ಶಿವಲೀಲಾ ಕೇದಾರಿ ಎಂಬ ಭಕ್ತೆಯ ಮನೆಯಲ್ಲಿ ಗುರುರಾಘವೇಂದ್ರ ಶ್ರೀಗಳ ಪವಾಡವಾಗಿದೆ. ಎಂದಿನಂತೆ ಶಿವಲೀಲಾ ಮಂಗಳವಾರದಂದು ಶ್ರೀಗಳ ಪೂಜೆ ಮಾಡಿ ರಾಘವೇಂದ್ರ ಶ್ಲೋಕ ಹೇಳುವಾಗ ತನ್ನಿಂದ ತಾನೇ ದೀಪ ಮುಂದೆ ಬಂದಿದ್ದು, ಭಯಗೊಂಡ ಶಿವಲೀಲಾ ತನ್ನ ಮೊಬೈಲ್ ನಲ್ಲಿ ದೀಪ ಸರಿಯುವ ದೃಶ್ಯಾವಳಿ ಸೆರೆ ಮಾಡಿಕೊಡಿದ್ದಾಳೆ. ಶಿವಲೀಲಾಳಿಗೆ ದೀಪದ ರೂಪದಲ್ಲಿ ರಾಯರು ಅನುಗ್ರಹಿಸಿದ್ದಾರೆ.
ಬೃಂದಾವನಸ್ಥರಾಗಿ ಶತಮಾನಗಳು ಕೆಳೆದರು ಮುಂದುವರೆದ ರಾಯರ ಪವಾಡಗಳು, ಸದ್ಯ ಶಿವಲೀಲಾ ಕೇದಾರಿ ಭಕ್ತೆಯ ಮನೆಯಲ್ಲಿ ರಾಯರ ಪವಾಡವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.