ಬೈಲಹೊಂಗಲ : ಬೈಲಹೊಂಗಲ ಹಾಗೂ ಮುರಗೋಡದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಿಂದ ಪ್ರಯಾಗರಾಜ್ ಯಾತ್ರೆಗೂ ಮೊದಲು
ಪಟ್ಟಣದ ಕರಿಗುಡಿ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನ ಅರ್ಚಕರಾದ ಹರ್ಷಾ ಪೂಜಾರಿ ಅವರು ಮಾತನಾಡಿ ಈ ವಿಶೇಷ ಮಹಾಕುಂಭ ಮೇಳ 144 ವರ್ಷಗಳ ನಂತರ ನಡೆಯುತ್ತಿದ್ದು ಸಾಗರೋಪಾದಿಯಲ್ಲಿ ಜನ ಯಾತ್ರೆ ಕೈಗೊಂಡಿದ್ದು ಜಿಲ್ಲೆಯಿಂದ ಅದರಲ್ಲೂ ಬೈಲಹೊಂಗಲದಿಂದ ಪುಣ್ಯ ಸ್ನಾನ ಮಾಡಲು ಸಾವಿರಾರು ಜನ ಸ್ವಂತ ವಾಹನ,ರೈಲು ಮೂಲಕ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದು ಯಾತ್ರಿಕರ ಕ್ಷೇಮಕ್ಕಾಗಿ ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಶಾಂತ್ ಅಮ್ಮಿನಭಾವಿ, ಚಿದಂಬರ ಮೇಟಿ, ಸಚಿನ್ ಕಡಿ, ಮಹೇಶ್ ನರಿ, ಪ್ರವೀಣ್ ಶಿಂಗಾರಿ, ಗಿರೀಶ್ ಹರಕುಣಿ, ಈರಣ್ಣ ಕಾಜಗಾರ, ಸಂತೋಷ ಕಮತಗಿ, ಮಹಾಂತೇಶ ಪಾಟೀಲ, ಕಾರ್ತಿಕ ಬಾಳಿಕಾಯಿ, ವಿಷ್ಣು ಲಮಾಣಿ,ರವಿ ಯಾಸನ್ನವರ, ಅಭಿಷೇಕ ಈಟಿ ಹಾಗೂ ಅನೇಕರು ಉಪಸ್ಥಿತರಿದ್ದರು