ಇಂಫಾಲದಲ್ಲಿ 9 ಉಗ್ರರ ಬಂಧನ

Ravi Talawar
ಇಂಫಾಲದಲ್ಲಿ 9 ಉಗ್ರರ ಬಂಧನ
WhatsApp Group Join Now
Telegram Group Join Now

ಇಂಫಾಲ (ಮಣಿಪುರ): ವಿವಿಧ ನಿಷೇಧಿತ ಸಂಘಟನೆಗೆ ಸೇರಿದ್ದ 9 ಉಗ್ರರನ್ನು ಪೂರ್ವ ಮತ್ತು ಪಶ್ಚಿಮ ಇಂಫಾಲ ಹಾಗೂ ಕಕ್ಚಿಂಗ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಫಾಲ್ ಪೂರ್ವ ಜಿಲ್ಲೆಯ ಮಂತ್ರಿಪುಖ್ರಿ ಠಾಕುರ್ಬರಿ ಪ್ರದೇಶದಿಂದ ಕಾಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ಸಿಟಿ ಮೈತೆ) ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಬಂಧಿತರಿಂದ ಒಂದು 9 ಎಂಎಂ ಪಿಸ್ತೂಲ್, ಮ್ಯಾಗಜೀನ್, 11 ಜೀವಂತ ಗುಂಡುಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ

ನಿಷೇಧಿತ ಕಂಗ್ಲೇಪಕ್ ಕಮ್ಯುನಿಸ್ಟ್ ಪಾರ್ಟಿ (ಎಂಸಿ) ಪ್ರಗತಿಪರ ಸದಸ್ಯನನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಸಿಂಗ್ಜಮೇಯಿ ತೊಕ್ಚೋಮ್ ಲೈಕೈಯಲ್ಲಿ ಬಂಧಿಸಲಾಗಿದೆ. ಈತ ಸುಲಿಗೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article