ಮುರಗೋಡ: ಜನಪರ ಸೇವೆ ಮಾಡುವ ಮನೋಭಾವನೆಯಿಂದ ರಾಜಕಾರಣದಲ್ಲಿರುವ ಯುವ ನಾಯಕ ಎಫ್.ಎಸ್.ಸಿದ್ದನಗೌಡರ ಅವರನ್ನ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ನೈರುತ್ಯ ರೈಲ್ವೆ ವಿಭಾಗದ ಡಿ.ಆರ್.ಯು.ಸಿ.ಸಿ ಸದಸ್ಯರಾಗಿ ನಾಮನಿರ್ದೇಶನ ಮಾಡಿರುವದು ಕಾರ್ಯಕರ್ತರಲ್ಲಿ ಹುಮ್ಮುಸ್ಸು ಮುಡಿದೆ ಎಂದು ಹಿರಿಯರಾದ ಮಹಾಂತೇಶ ಕಾರಿ ಹೇಳಿದರು.
ಗ್ರಾಮದ ಖಾಸಬಾ ಓಣಿಯ ಭಜನಾ ಸಭಾ ಭವನದಲ್ಲಿ ಗ್ರಾಮಸ್ಥರಿಂದ ಅಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಜನಸಾಮಾನ್ಯರ ನೋವಿಗೆ ಸದಾ ಸ್ಪಂದಿಸುವ ವ್ಯಕ್ತಿಗಳಿಗೆ ಅಧಿಕಾರ ನೀಡಿದರೆ ಜನ ನೆಮ್ಮದಿಯ ಬದುಕು ಸಾಗಿಸಬಹುದಾಗಿದೆ. ನಾಡು ನುಡಿಯ ಸೇವೆಯಲ್ಲಿದ್ದು ಮೌಲ್ಯಾಧಾರಿತ ರಾಜಕಾರಣಿಗಳಾಗಿ ಪ್ರತಿಯೊಬ್ಬರಲ್ಲಿ ಬೆರೆಯುವ ಗುಣ ಹೊಂದಿದ ಎಫ್.ಎಸ್.ಸಿದ್ದನಗೌಡರ ಅವರು ಕೇಂದ್ರ ಸರ್ಕಾರದ ನಾಮನಿರ್ದೇಶನವಾಗಿರುವದು ಈ ಮುರಗೋಡ ನಾಡಿಗೆ ಗೌರವ ತಂದಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ರೈಲ್ವೆ ಗ್ರಾಹಕರ ಕುಂದು ಕೊರತೆ ನಿಗಿಸುವದರೊಂದಿಗೆ ಯಲ್ಲಮ್ಮನ ಕ್ಷೆತ್ರ, ಸೊಗಲ ಮುರಗೋಡ ಬೈಲಹೊಂಗಲ ರೈಲ್ವೆ ಯೊಜನೆ ಕಾಣಲೆಂದರು.
ಸತ್ಕಾರ ಸ್ವೀಕರಿಸಿ ಎಫ್.ಎಸ್ ಸಿದ್ದನಗೌಡರ ಮಾತನಾಡಿ, ಮುರಗೋಡ ಭಾಗದ ಅನೇಕ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿದ ಪ್ರತಿಫಲವೆ ಇಂದು ನನಗೆ ಶ್ರೀರಕ್ಷೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮದ ದುಂಡಪ್ಪ ಕಾರಿ ಪರಮಾನಂದ ತಟ್ಟಿಮಣಿ, ಮಹೇಶ್ ಪಾಟೀಲ್, ಮಲ್ಲಪ್ಪ ಕಾರಿ ಸೋಮನಗೌಡ ಪಾಟೀಲ, ಸೋಮನಗೌಡ ಮುದ್ಗಣ್ಣವರ, ಶ್ರೀಶೈಲ್ ಬೆಟ್ಟದ, ಬಸ್ಸು ಮರ್ಬಣ್ಣವರ, ಯಶ್ವಂತಗೌಡ ಪಾಟೀಲ್, ಕಾಳಪ್ಪ ಹಡಪದ, ಸೋಮನಿಂಗ್ ದಳವಾಯಿ ಸೋಮನಿಂಗ್ ಪಿರಗೋಜಿ, ಚಿದಂಬರ ಸಿದ್ದನಗೌಡರ, ಈರಣ್ಣ ಸಿದ್ದನಗೌಡರ ಚಂದ್ರು ಕಾಳಣ್ಣವರ ಸೇರಿದಂತೆ ಇನ್ನು ಅನೇಕ ಇದ್ದರು.