ಡಾ.ಎಸ್.ಆರ್ ಹೀರೆಮಠ್ ಯೋಗ ಸರ್ಟಿಫಿಕೇಟ್ ಕೋರ್ಸ್ ವಿತರಣೆ  ಕಾರ್ಯಕ್ರಮ

Ravi Talawar
ಡಾ.ಎಸ್.ಆರ್ ಹೀರೆಮಠ್ ಯೋಗ ಸರ್ಟಿಫಿಕೇಟ್ ಕೋರ್ಸ್ ವಿತರಣೆ  ಕಾರ್ಯಕ್ರಮ
WhatsApp Group Join Now
Telegram Group Join Now
ಬಳ್ಳಾರಿ  ಫೆ 02. ಉತ್ತಮ ಆರೋಗ್ಯ ಹೊಂದುವ ದೇಶ ಆಗಬೇಕಾದರೇ ಯೋಗ ಧ್ಯಾನ ಮುಖ್ಯ.ಔಷಧಿ ಇಲ್ಲದೆ ಜೀವನ, ಎದ್ದಕೂಡಲೇ ಆನಂದದಿಂದ ಇರಬೇಕು ಇದು ಆರೋಗ್ಯವಂತ ವ್ಯಕ್ತಿಯ ಜೀವನ ಎಂದು ಗದಗ್ ಜಿಲ್ಲೆಯ ಶಿವಾನಂದ ಯೋಗ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಆರ್. ಹೀರೆಮಠ್ ಅವರು ಯೋಗ ಪಟುಗಳಿಗೆ ತಿಳಿಸಿದರು.
ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯಲ್ಲಿ 7ನೇ ಕ್ರಾಸ್ ನಲ್ಲಿ ಇರುವ ಸರ್.ಎಂ.ವಿಶ್ವೇಶ್ವರಯ್ಯ ಯೋಗಕೇಂದ್ರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಗದಗ ಜಿಲ್ಲೆಯ ಶಿವಾನಂದ ಯೋಗ ಕಾಲೇಜು ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಜೆ.ಎಸ್.ಎಸ್.ವಿ.ಎಸ್ ಸೆಮಿಸ್ಟರ್ ಸರ್ಟಿಫಿಕೇಟ್ ಇನ್ ಯೋಗ ಸ್ಟಡೀಸ್. ಗದಗ ನೇತೃತ್ವದಲ್ಲಿ  ಯೋಗ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ಪ್ರಾರ್ಥನೆ ಮೂಲಕ ಆರಂಭವಾಯಿತು.
ಶಿವಾನಂದ ಯೋಗ ಗದಗ ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್.ಹಿರೇಮಠ್ ಆರಂಭದಲ್ಲಿ ಮೂರು ಬಾರಿ ಓಂಕಾರ ಹೇಳಿ ನಂತರ ಮಾತನಾಡಿದ ಅವರು ಪ್ರತಿನಿತ್ಯ ಯೋಗ ಮಾಡಿದ್ರೇ ಆರೋಗ್ಯ ಉತ್ತಮವಾಗಿರುತ್ತದೆ. 24 ತಾಸುಗಳಲ್ಲಿ ಒಂದು ತಾಸು ಯೋಗ ಮಾಡಿದರೆ 23 ತಾಸು ಉತ್ತಮವಾಗಿ ಜೀವನ ಮಾಡಲು ಸಾಧ್ಯ ಎಂದರು.
ಬಾಬಾ ರಾಮ್ ದೇವ ಅವರು ಮನೆಗಳಲ್ಲಿ, ಓಣಿಗಳಲ್ಲಿ ಯೋಗ ಮಾಡಿದರೆ ಭಾರತ ಸ್ವಸ್ಥ ಆಗಲು ಸಾಧ್ಯವೆಂದು ಹೇಳಿದ್ದಾರೆ.ಮನೋವೈದ್ಯರು ಮಾನಸಿಕ ಸಾಮರ್ಥ್ಯ ನೋಡಿ ಮಾತ್ರೆ ಕೊಡುತ್ತಾರೆ ಆದರೆ ಇಂದು ಕೆಲ ವೈದ್ಯರು ಯೋಗ ಧ್ಯಾನ ಮಾಡಿ ಎಂದು ಮಾಹಿತಿ ನೀಡುತ್ತಾರೆ.
 ಈ ಸಮಯದಲ್ಲಿ  ಯೋಗ ಕೇಂದ್ರದ ಪವಿತ್ರ  ಮಾತನಾಡಿದ ಅವರು ಯೋಗದಿಂದ ರೋಗಮುಕ್ತಿ ಎನ್ನುವ ವಿಚಾರದ ಬಗ್ಗೆ ತಮ್ಮ ಅನುಭವದ ಬಗ್ಗೆ ಮಾತನಾಡಿದರು. ಭಾರತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಯೊಂದು ಕ್ಷೇತ್ರದಲ್ಲಿ ಯೋಗ ಮಾಡುವ ಅವಕಾಶ ನೀಡಿದ್ದಾರೆ.ಅದನ್ನು ಅನುಸರಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಯೋಗ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಬಳ್ಳಾರಿ ನಗರ ನಿವಾಸಿ ಹಾಗೂ ಯೋಗ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ಸಿದ್ದೇಶ್, ಚಂದ್ರಶೇಖರ, ತಿಪ್ಪೆಸ್ವಾಮಿ, ಹನುಮಂತಪ್ಪ.ಜಿ, ಅಶೋಕ್ ದಿನ್ನಿ ಹಾಜರಿದ್ದರು, ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು.
ಅಧ್ಯಕ್ಷತೆವಹಿಸಿ ಮಾತನಾಡಿದ ವಸ್ತ್ರದ್ ಅವರು ಪ್ರತಿನಿತ್ಯ ಯೋಗ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಯುವಕರು ಈ ಯೋಗ ಕ್ಷೇತ್ರಬನ್ನಿ ಎಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆ  ಜಯಶ್ರೀ, ನಿರೂಪಣೆ ಅಶೋಕ್ ದಿನ್ನಿ, ಸ್ವಾಗತ ಪೊಲೀಸ್ ಹನುಮಂತಪ್ಪ ಜಿ, ಇಟಿಗಿ, ವಂದನಾರ್ಪಣೆ ಮಲ್ಲಿಕಾರ್ಜುನ ನೆರವೇರಿಸಿದರು.
ಈ ಸಮಯದಲ್ಲಿ ಕಪ್ಪಗಲ್ಲು ರಸ್ತೆಯ 7ನೇ ಕ್ರಾಸ್ ನಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಯೋಗ ಕೇಂದ್ರದ ಸಾಧಕರು, ಮಹಿಳೆಯರು, ಮಕ್ಕಳು, ಯುವಕರು ಹಾಜರಿದ್ದರು
WhatsApp Group Join Now
Telegram Group Join Now
Share This Article