ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನಾರೋಗ್ಯದ ಮಧ್ಯೆಯೂ ನಿಲ್ಲದ ಯೋಜನೆಗಳ ಸರಣಿ

Ravi Talawar
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನಾರೋಗ್ಯದ ಮಧ್ಯೆಯೂ ನಿಲ್ಲದ ಯೋಜನೆಗಳ ಸರಣಿ
WhatsApp Group Join Now
Telegram Group Join Now

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೆರವಣಿಗೆ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನಾರೋಗ್ಯದ ಮಧ್ಯೆಯೂ ನಿಲ್ಲದ ಯೋಜನೆಗಳ ಸರಣಿ

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೂ ಆಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಅನಾರೋಗ್ಯದ ಮಧ್ಯೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರಿದಿವೆ.

ನಿತ್ಯ ಒಂದಿಲ್ಲೊಂದು ಅಭಿವೃದ್ಧಿ ಯೋಜನೆಗಳಿಗೆ ಸಚಿವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇಲ್ಲವೇ, ಸ್ಥಳೀಯ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ.

ಭಾನುವಾರ ಕ್ಷೇತ್ರದ ಹೊನ್ನಿಹಾಳ ಗ್ರಾಮದ ಎಸ್.ಸಿ.ಕಾಲೋನಿಯ ರಸ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಭೂಮಿ‌ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ್ರಕಾಶ ಕಡ್ಯಾಗೋಳ, ಶಿವಾನಂದ ಮಠದ, ಮಹಾದೇವ ತಳವಾರ, ಸುರೇಖಾ ಕಟಬುಗೋಳ, ಗುಂಡು ತಳವಾರ, ರಾಜು ತಳವಾರ, ಸುರೇಶ ಕಟಬುಗೋಳ, ನಿಲೇಶ್ ಚಂದಗಡ್ಕರ್, ಲಕ್ಷ್ಮಣ ಮಲ್ಲವ್ವಗೋಳ, ಭೀಮ ನರಗುಂದ್ಕರ್, ದಾದಾಪೀರ್ ಸಾಂಬ್ರೇಕರ್ ಉಪಸ್ಥಿತರಿದ್ದರು.

ಮಾವಿನಕಟ್ಟೆನಂತರ, ಕ್ಷೇತ್ರದ ಮಾವಿನಕಟ್ಟಿ ಗ್ರಾಮದಿಂದ ಬಾಪುಸಾಹೇಬ್ ಜಾಧವ್ ತೋಟದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚನ್ನರಾಜ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸುಮಾರು 2 ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಮಯದಲ್ಲಿ ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ, ಮಹೇಶ ಮಲ್ಲಣ್ಣವರ, ರಾಜು ನೇಸರಗಿ, ಅಶೋಕ ಕೋಲಕಾರ, ಪ್ರವೀಣ ಕೋಲಕಾರ, ಪಾರೇಶ ಕೋಲಕಾರ, ರಾಜು ಅರಗಂಜಿ ಮುಂತಾದವರು ಉಪಸ್ಥಿತರಿದ್ದರು.

ಮಾರಿಹಾಳ ಗ್ರಾಮದ ಹೊಲಗದ್ದೆಗೆ ತೆರರುವ ಮಾರ್ಗ ಪೂಜೆ.

ಬೆಳಗಾವಿ.ಮಾರಿಹಾಳ ಗ್ರಾಮದ ಪತ್ರಿ ಬಸವೇಶ್ವರ ದೇವಸ್ಥಾನದಿಂದ ಹೊಲಗದ್ದೆಗಳಿಗೆ ತೆರಳುವ ಕುಮರಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಅವರಿಂದ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಈ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ವೇಳೆ ಅಡವಯ್ಯ ಸ್ವಾಮೀಜಿ, ಗಿರಿಜಾ ಪಾಟೀಲ, ಬಸವರಾಜ ಮ್ಯಾಗೋಟಿ, ಶಂಕರ ಸೊಗಲಿ, ಪ್ರಕಾಶ ಯಲ್ಲಪ್ಪನವರ, ಈರಣ್ಣ ಹಿರವಣ್ಣವರ, ಬಸವರಾಜ ಹಿತ್ತಲಮನಿ, ಗುಡದಪ್ಪ ಗೊರವ್, ಯಲಗುಂಡ ಸೀತಿಮನಿ, ಬಸವಣ್ಣಿ ಬಾಲನಾಯ್ಕ್, ಮಲ್ಲಣ್ಣ ಹಿರವಣ್ಣವರ, ಬಸವಣ್ಣಿ ಬಾಲನಾಯ್ಕ್, ಬಾಳು ಕರವಿನಕೊಪ್ಪ, ಅಶೋಕ್ ಸಾಳುಂಕೆ, ವಿನೋದ್ ಚೌಹಾನ್, ಸದಾಶಿವ ಧರ್ಮೋಜಿ, ಸಂಜಯ ಚಾಟೆ, ಅರ್ಫತ್ ಫನಿಬಂದ, ಶಿವಗುಂಡ ಹಿತ್ತಲಮನಿ, ವಿಠ್ಠಲ ಮಲಾರಿ, ಈಶ್ವರಪ್ಪ ವಾಲಿಶೆಟ್ಟಿ, ರಮೇಶ ಅಕ್ಕತಂಗೇರಹಾಳ, ನಜೀರ್ ಫನಿಬಂದ, ಆಯೇಶಾ ನಾಲಬಂದ, ನಿಸರ್ಗ ಮೋರೆ, ಬಸು ವಣ್ಣೂರ್, ಸಿದ್ಧಪ್ಪ ಸಾಳುಂಕೆ, ರಾಮ ಕರ್ನಾಚಿ, ಮುದಕಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article