ಬಾಲಿವುಡ್ ನ ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಮಹಿಳಾ ಅಭಿಮಾನಿ ಒಬ್ಬರಿಗೆ ತುಟಿಗೆ ಮುತ್ತಿಟ್ಟು ಬಹಳಷ್ಟು ಟ್ರೋಲ್ ಆಗುತ್ತಿದ್ದಾರೆ. ಗಾಯಕ ಉದಿತ್ ನಾರಾಯಣ್ ಲೈವ್ ಶೋ ನೀಡುತ್ತಿದ್ದ ಸಂದರ್ಭ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ನಟನೆಯ ಚಿತ್ರದ ‘ಟಿಪ್ ಟಿಪ್ ಬರ್ಸಾ ಪಾನಿ’ ಎಂಬ ಪ್ರಸಿದ್ಧ ಗೀತೆಯನ್ನು ಹಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಉದಿತ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಅನುಮತಿಸುವಂತೆ ಬಾಡಿಗಾರ್ಡ್ ಬಳಿ ಮನವಿ ಮಾಡಿದ್ದಾರೆ. ಇದನ್ನು ಕಂಡು ಗಾಯಕ ಉದಿತ್ ಕೂಡ ಹಾಡನ್ನು ಹಾಡುತ್ತಲೇ ಆಕೆಗೆ ಸೆಲ್ಫಿ ಪಡೆಯಲು ಅನುಮತಿ ನೀಡಿದ್ದು ಮಂಡಿ ಊರಿ ಸೆಲ್ಫಿಗೆ ಪೋಸ್ ನೀಡಲು ಮುಂದಾಗಿದ್ದಾರೆ.
ಫೋಟೋಗಳನ್ನು ಕ್ಲಿಕ್ ಮಾಡಿದ ನಂತರ ಮಹಿಳಾ ಅಭಿಮಾನಿಯೇ ಉದಿತ್ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಆ ನಂತರ ಉದಿತ್ ಕೂಡ ಮಹಿಳಾ ಅಭಿಮಾನಿಗಳ ಕೆನ್ನೆಗೆ ಮುತ್ತಿಡುತ್ತಾರೆ.ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗಾಯಕನ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ.