ನವದೆಹಲಿ: ಆದಾಯ ತೆರಿಗೆದಾರರಿಗೆ ಬಜೆಟ್ನಲ್ಲಿ ಬಂಪರ್ ಲಾಟರಿ ಸಿಕ್ಕಿದ್ದು,ರುವವರಿಗೆ 12 ಲಕ್ಷದವರೆಗೆ ಆದಾಯ ಹೊಂದಿತೆರಿಗೆ ವಿನಾಯಿ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಇನ್ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.