ಧನದಾನ್ಯ ಕೃಷಿ ಯೋಜನೆಗೆ 1.7 ಕೋಟಿ ಮೀಸಲು: 100 ಜಿಲ್ಲೆಗಳಿಗೆ ನೂತನ ಕಾರ್ಯಕ್ರಮ ಘೋಷಿಸಿದ ಸೀತಾರಾಮನ್‌

Ravi Talawar
ಧನದಾನ್ಯ ಕೃಷಿ ಯೋಜನೆಗೆ 1.7 ಕೋಟಿ ಮೀಸಲು:  100 ಜಿಲ್ಲೆಗಳಿಗೆ ನೂತನ ಕಾರ್ಯಕ್ರಮ ಘೋಷಿಸಿದ ಸೀತಾರಾಮನ್‌
WhatsApp Group Join Now
Telegram Group Join Now

ನವದೆಹಲಿ: ಕೇಂದ್ರ ಬಜೆಟ್​​ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ ಹಲವು ಘೋಷಣೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಾಡಿದ್ದಾರೆ. ಕಡಿಮೆ ಇಳುವರಿ ಬೆಳೆಗಳನ್ನು ಬೆಳೆಯುತ್ತಿರುವ 100 ಜಿಲ್ಲೆಗಳಿಗೆ ಈ ಧನ ಧಾನ್ಯ ಕೃಷಿ ಯೋಜನೆಯು ಅನ್ವಯವಾಗಲಿದೆ. ಆಧುನಿಕ ಕೃಷಿ ಪದ್ದತಿಯು ಈ ಯೋಜನೆಯಡಿ ಈ ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಈ ಯೋಜನೆ 1.7 ಕೋಟಿ ರೈತರಿಗೆ ನೆರವಾಗಲಿದೆ ಎಂದು ಸೀತಾರಾಮನ್​ ತಿಳಿಸಿದ್ದಾರೆ.

‘ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ’ ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮವಾಗಿದ್ದು, ನಮ್ಮ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಕೈಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ’ ಎಂದರು.

WhatsApp Group Join Now
Telegram Group Join Now
Share This Article