ನವದೆಹಲಿ, ಫೆಬ್ರವರಿ 1: ಆದಾಯ ತೆರಿಗೆ ಪಾವತಿ ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಆದಾಯ ತೆರಿಗೆ ಕಾನೂನು ರೂಪಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಇದಕ್ಕಾಗಿ ಸರ್ಕಾರ ಮುಂದಿನ ವಾರ ಹೊಸ ಮಸೂದೆ ಮಂಡನೆ ಮಾಡಲಿದೆ ಎಂದು ಅವರು ತಿಳಿಸಿದರು.
1961ರ ಆದಾಯ ತೆರಿಗೆ ಕಾಯಿದೆ ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿದೆ. 2020 ರ ಬಜೆಟ್‌ನಲ್ಲಿ, ಸರ್ಕಾರವು ಈ ಕಾನೂನಿನ ಅಡಿಯಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿತ್ತು. ಆದರೆ 2024 ರ ಜುಲೈಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ, ದೇಶದಲ್ಲಿ ಆದಾಯ ತೆರಿಗೆ ಕಾನೂನನ್ನು ಬದಲಾಯಿಸುವ ಅಗತ್ಯವಿದೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿತ್ತು. ಇದಕ್ಕಾಗಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಈಗ ಅದರ ಆಧಾರದ ಮೇಲೆ, ಸರ್ಕಾರವು ಹೊಸ ಮಸೂದೆಯನ್ನು ತರಲು ಘೋಷಿಸಿದೆ.