ಭಗ್ಪತ್(ಉತ್ತರ ಪ್ರದೇಶ): ಜೈನ ಸಮುದಾಯದ ಕಾರ್ಯಕ್ರಮಕ್ಕೆ ನಿರ್ಮಿಸಲಾಗಿದ್ದ ಮರದ ನಿರ್ಮಿತಿ ಕುಸಿದು ಐವರು ಸಾವನ್ನಪ್ಪಿ, 40 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಭಗ್ಪತ್ನ ಬರುತ್ ಎಂಬಲ್ಲಿ ಮಂಗಳವಾರ ಸಂಜೆ ನಡೆಯಿತು.
ಈ ಕುರಿತು ಜಿಲ್ಲಾಧಿಕಾರಿ ಅಸ್ಮಿತ ಲಾಲ್ ಪ್ರತಿಕ್ರಿಯಿಸಿ, “ಮಂಗಳವಾರ ಸಂಜೆ ಈ ಘಟನೆ ನಡೆಯಿತು. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ 20 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ” ಎಂದರು.
ಭಗ್ಪತ್ ಎಸ್ಪಿ ಅರ್ಪಿತ ವಿಜಯ್ವರ್ಗೀಯಾ ಮಾತನಾಡಿ, “ಘಟನೆಯ ತನಿಖೆ ನಡೆಯುತ್ತಿದೆ. 2-3 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ತಿಳಿಸಿದರು.
ಕಳೆದ 30 ವರ್ಷಗಳಿಂದಲೂ ಬರುತ್ನಲ್ಲಿ ಜೈನ ಸಮುದಾಯ ಲಡ್ಡು ಮಹೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಬಾರಿ ಮರದ ನಿರ್ಮಿತಿ ಕುಸಿದಿದ್ದು, ಘಟನೆ ಸಂಭವಿಸಿತು. ಜಿಲ್ಲಾಡಳಿತ ಮತ್ತು ಅಗ್ನಿ ಶಾಮಕದಳ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ನಡೆಸಿದೆ” ಎಂದು ಅವರು ಮಾಹಿತಿ ನೀಡಿದರು.