ಧಾರವಾಡ: ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪ್ರಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸಂಸ್ಥೆಯ ಕಾರ್ಯಾದ್ಯಕ್ಷರಾದ, ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೂರ್ವ ಮಹಾಪೌರರಾದ ಈರೇಶ ಅಂಚಟಗೇರಿಯವರು ದ್ವಜಾರೋಹಣವನ್ನು ನೆರೆವೆರಿಸಿ, ಅವರು ಭಾರತದ ಗಣರಾಜ್ಯೋತ್ಸವ ಮತ್ತು ಸಂವಿಧಾನದ ಮಹತ್ವವನ್ನು ಹೇಳುತ್ತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಕಾರ್ಯದರ್ಶಿ ಮತ್ತು ವಿಭಾಗಗಳ ಮುಖ್ಯಸ್ಥರು ಸಂಸ್ಥೆಯ ಸಿಬ್ಬಂದಿಯವರು ಮತ್ತು ಶಾಲಾ ಮಕ್ಕಳು ಈ ಸಮಯದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ದೀಪಾ ಕಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಸವರಾಜ ತಾಳಿಕೊಟಿ, ಜಿ. ಜಿ. ಹಿರೇಮಠ , ಡಾ. ಉಮಾ ಚವ್ಹಾಣ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ. ರಾಧಾಕೃಷ್ಣನ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿಯವರು ಮತ್ತು ಶಾಲಾ ಮಕ್ಕಳು ಈ ಸಮಯದಲ್ಲಿ ಉಪಸ್ಥಿತರಿದ್ದರು. ಡಾ.ರಾಜಕುಮಾರ ನಾಯಕ ಹಾಗೂ ಪ್ರಾಚಾರ್ಯರಾದ ಡಾ. ವಿ.ಬಿ ಪೂಜಾರ ಹಾಜರಿದ್ದರು.