ಜನಾರ್ದನರೆಡ್ಡಿ ಯವರ ಸಹಕಾರ ಇಲ್ಲದಿದ್ದರೆ ಶ್ರೀರಾಮುಲು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲ:  ದರಪ್ಪ ನಾಯಕ 

Ravi Talawar
ಜನಾರ್ದನರೆಡ್ಡಿ ಯವರ ಸಹಕಾರ ಇಲ್ಲದಿದ್ದರೆ ಶ್ರೀರಾಮುಲು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲ:  ದರಪ್ಪ ನಾಯಕ 
WhatsApp Group Join Now
Telegram Group Join Now
ಬಳ್ಳಾರಿ,ಜ,25; ಬಿಜೆಪಿಯ ಹಿರಿಯ ಧುರೀಣರು, ಮಾಜಿ ಸಚಿವರು ಹಾಗೂ ಗಂಗಾವತಿ ಶಾಸಕರಾದ ಜನಾರ್ದನರೆಡ್ಡಿಯವರು 14 ವರ್ಷಗಳ ವನವಾಸ ಅನುಭವಿಸಿದ್ದಾರೆ. ಈ ಹಿಂದೆ ಜನಾರ್ದನ ರೆಡ್ಡಿಯವರ ಜೊತೆ ಅಣ್ಣ ತಮ್ಮಂದಿರಂತೆ ಇದ್ದಾಗ ಜನಾರ್ದನರೆಡ್ಡಿಯವರು ಆಸ್ತಿ ಮಾಡಿದ್ದರು. ಆ ಆಸ್ತಿಯನ್ನು ಶ್ರೀರಾಮುಲು ರವರು ವಾಪಸು ಕೊಟ್ಟು ವಾಲ್ಮೀಕಿ ಸಮುದಾಯದ ಘನತೆ ಗೌರವವನ್ನು ಕಾಪಾಡಬೇಕು ಎಂದು ಬಿಜೆಪಿ ಮುಖಂಡ ದರಪ್ಪ ನಾಯಕ ಹೇಳಿದರು. ನಗರದ ಖಾಸಗಿ ಹೊಟೆವೊಂದರಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಲ
ಕಳೆದ ಹಲವಾರು ವರ್ಷಗಳಿಂದ ಅಣ್ಣ- ತಮ್ಮಂದಿರಂತೆ ಇದ್ದ ಜನಾರ್ದನರೆಡ್ಡಿ ಶ್ರೀರಾಮುಲು, ಟಿ.ಹೆಚ್.ಸುರೇಶ್ ಬಾಬು ಪಕ್ಕೀರಪ್ಪ,ಸೇರಿದಂತೆ ಇನ್ನಿತರರು ಕೂಡಿ ಇದ್ದಾಗ ಮಾಡಿದ ಆಸ್ತಿಯನ್ನು ಹಿಂತಿರುಗಿಸಿ ನಾನು 14 ವರ್ಷಗಳ ವನವಾಸ ಜನಾರ್ದನರೆಡ್ಡಿ ಯವರು ಹೇಳಿದ್ದರು ಅಷ್ಟೆ ಅದು ಈಗ ವೈಮನಸ್ಸಿಗೆ ಕಾರಣವಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಜನಾರ್ದನ ರೆಡ್ಡಿಯವರ ಕೊಡುಗೆ ಅಪಾರವಾದದು ವಾಲ್ಮೀಕಿ  ಜಯಂತಿಯ ದಿನದಂದು ರಜೆಯನ್ನಾಗಿ ಘೋಷಣೆ ಮಾಡಲು ಜನಾರ್ದನರೆಡ್ಡಿಯವರ ಪಾತ್ರ ದೊಡ್ಡದಿದೆ. ಶ್ರೀರಾಮುಲು ರವರನ್ನು ಶಾಸಕ. ಸಚಿವರನ್ನಾಗಿ ಮಾಡಲು ಬಹಳ ಶ್ರಮಪಟ್ಟಿದ್ದಾರೆ ಅದನ್ನು ಶ್ರೀರಾಮುಲು ರವರು ಮರೆಯಬಾರದು, 2008 ರಲ್ಲಿ ಸುರೇಶ್ ಬಾಬು, ಸೋಮಲಿಂಗಪ್ಪ, ಬಿ.ನಾಗೇಂದ್ರ, ಶ್ರೀರಾಮುಲು, ನೇಮಿರಾಜ್ ನಾಯ್, ಚಂದ್ರನಾಯ್ಕರವರನ್ನು ಶಾಸಕರನ್ನಾಗಿ ಮಾಡಿದ್ದು, ಜೆ.ಶಾಂತ ಹಾಗೂ ಸಣ್ಣ ಪಕ್ಕೀರಪ್ಪ ರವರು ಸಂಸದರಾಗಲು ಜನಾರ್ದನ ರೆಡ್ಡಿಯವರ ಪಾತ್ರ ದೊಡ್ಡದಿದೆ ಇದನ್ನು ಎಂದಿಗೂ ಮರೆಯಬಾರದು. ಜನಾರ್ದನರೆಡ್ಡಿ ಯವರಿಗೆ ಶ್ರೀರಾಮುಲು ಅವರ ಮೇಲೆ ಬಹಳ ಗೌರವವಿತ್ತು. ಇತಿಹಾಸದಲ್ಲಿ
ವಾಲ್ಮೀಕಿ ಸಮುದಾಯದ ಜನರು ಧೈರ್ಯ, ಸಾಹಸಕ್ಕೆ, ನಂಬಿಕೆ ಮತ್ತು ಸ್ವಾಮಿ ನಿಷ್ಠೆಗಳಿಗೆ ಹೆಸರು ವಾಸಿಯಾದಂತಹ ಸಮಾಜ ನಮ್ಮದು ಅಂತಹದಲ್ಲಿ ಶ್ರೀರಾಮುಲು ರವರು ರಾಜ್ಯ ಮಟ್ಟದ ನಾಯಕರಾಗಿ ಬೆಳೆದು ಇವತ್ತು ಜನಾರ್ದನ ರೆಡ್ಡಿಯವರ ಕೊಡುಗೆ ಏನೂ ಇಲ್ಲ, ನಾನೇ ಬೆಳೆದೆ ಎನ್ನುವುದು ತಪ್ಪು ಜನಾರ್ದನರೆಡ್ಡಿ ಯವರ ಸಹಕಾರ ಇಲ್ಲದಿದ್ದರೆ ಶ್ರೀರಾಮುಲು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿಲ್ಲ ಎಂದು ದರಪ್ಪ ನಾಯಕ ಹೇಳಿದರು.
ಪತ್ರಿಕಾಗೊಷ್ಠಿಯಲ್ಲಿ ಬಿಜೆಪಿ ಮುಖಂ ಡರಾದ ಮುನ್ನಾಬಾಯ್, ಉಮಾರಾಜ್, ರಾಘವೇಂದ್ರ, ಹನುಮೇಶ್ ಉಪ್ಪಾರ್, ಡಿ.ವಿಜಯ್ ಅಸುಂಡಿ ಸೂರಿ, ಹುಂಡೇಕರ್ ರಾಜೇಶ್, ಕೊಳಗಲ್ಲು ಅಂಜಿನಿ, ಮಹಾನಗರ ಪಾಲಿಕೆ ಸದಸ್ಯರಾದ ತಿಲಕ್, ಸುನೀಲ್ ರೆಡ್ಡಿ, ಸಂಜಯ್ ಬೆಟಿಗೇರಿ, ಕರ್ಚೇಡ್ ಮಲ್ಲಿಕಾರ್ಜುನ ಆಚಾರಿ, ಮರಿದೇವಯ್ಯ ಸೇರಿದಂತೆ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article