ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ಹಾಗೂ ಧಾರವಾಡ ಕೇಂದ್ರ ಕಾರಗೃಹ ಇವರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗ ಪತ್ತೆ ಆಂದೋಲನದ ಕುರಿತು ನೂರು ದಿನಗಳ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ರವಿಂದ್ರ ಭೋವೆರ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಕ್ಷಯರೋಗ ಪತ್ತೆ ಆಂದೋಲನವು ದುರ್ಬಲ ವರ್ಗದ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ಡಿಸೆಂಬರ 07, 2024 ರಿಂದ ಮಾರ್ಚ 17, 2025 ರವರೆಗೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನೂರು ದಿನಗಳವರೆಗೆ ನಡೆಯಲಿದೆ. 60 ವರ್ಷ ಮೇಲ್ಪಟ್ಟ ವೃದ್ದರು ಹಾಗೂ ತಂಬಾಕು ಸೇವನೆ, ದೂಮಪಾನ, ಮದ್ಯ ವ್ಯಸನಿ, ಕೊಳಚೆ ಪ್ರದೇಶ, ಪ್ಯಾಕ್ಟರಿ, ಬಿಡಿ ಕಾರ್ಮಿಕರು, ಹಾಗೂ ಇಟಂಗಿ ಬಟ್ಟಿಯಲ್ಲಿ ಕೆಲಸ ಮಾಡವರಿಗೆ ಕ್ಷಯ ಲಕ್ಷಣ ಉಳ್ಳ ಜನರಿಗೆ ಕ್ಷ-ಕಿರಣ ತಪಾಸಣೆ ಮಾಡಿ, ಕ್ಷಯ ರೋಗ ಖಚಿತ ಪಟ್ಟ ರೋಗಿಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾದ ಜಿಲ್ಲಾ ಕೇಂದ್ರ ಕಾರಗೃಹದ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಎಮ್.ಹೊನಕೇರಿ ಅವರು ಮಾತನಾಡಿ, ಕ್ಷಯರೋಗ ಲಕ್ಷಣಗಳ ಚಿಕಿತ್ಸೆಯ ಬಗ್ಗೆ ವಿವರವಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿ ಕೇಂದ್ರ ಕಾರಗೃಹದ ಸಹಾಯಕ ಅಧೀಕ್ಷಕಿ ನಿರ್ಮಲಾ ಬಿ. ಆರ್. ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಾರಗೃಹ ವೈದ್ಯಾಧಿಕಾರಿ ಡಾ. ಸಿದ್ದಾಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕಾರಗೃಹ ಶಿಕ್ಷಕ ಪಿ.ಬಿ.ಕುರಬೇಟ ಸ್ವಾಗತಿಸಿದರು. ಸುರೇಂದ್ರ ಕುಲಕರ್ಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜೈಲರ ಸುರೇಶ ಕರಗಾವಿ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕದ ಸಿಬ್ಬಂದಿಗಳು, ಕೇಂದ್ರ ಕಾರಗೃಹದ ಸಿಬ್ಬಂದಿಗಳು ಭಾಗವಹಿಸಿದ್ದರು.