ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಲಭ್ಯ

Ravi Talawar
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಲಭ್ಯ
WhatsApp Group Join Now
Telegram Group Join Now

ಬೆಂಗಳೂರು, ಜನವರಿ 20: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ತರುವ ಮುಖಾಮಖಿ ರಹಿತ ಆನ್ ಲೈನ್ ವ್ಯವಸ್ಥೆಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಇಂದು ಚಾಲನೆ ನೀಡಿದ್ದಾರೆ. ಪರಿಸರ ಕಾಯ್ದೆ, ಜಲ ಮಾಲಿನ್ಯ ವಾಯು ಮಾಲಿನ್ಯ ಕಾಯ್ದೆ ಅನುಷ್ಠಾನ ಆಗಬೇಕು. ಈ ನಿಟ್ಟಿನಲ್ಲಿ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಒಂದೇ ಸೂರಿನಡಿ ಅನುಮತಿ ಪಡೆಯಬಹುದು. ಆನ್​ಲೈನ್​ ಮೂಲಕವೇ ಅರ್ಜಿ‌ ಸಲ್ಲಿಸಬಹುದು. ಕಾಯ್ದೆಗಳ ಅನುಷ್ಠಾನ ಸರಿಯಾಗಿ ಆಗಬೇಕು. ಮಧ್ಯವರ್ತಿಗಳ ಕಾಟವಿಲ್ಲದೆ ಅನುಮತಿ ಪಡೆಯಬಹುದು. ಎಕ್ಸ್ ಜಿಎನ್ ತಂತ್ರಾಶ ಈಗಾಗಲೇ ಇತ್ತು. ಬೇಕಾದ ಕಾಗದ ಪತ್ರಗಳನ್ನ ಇದರಲ್ಲಿ ಪಡೆಯಬಹುದು. ಕೈಗಾರಿಕೆ, ಉದ್ಯಮ ನಡೆಸಲು ಪಡೆಯಬಹುದಾಗಿದೆ ಎಂದರು.

ಐಐಟಿ ನಿರ್ದೇಶಕ, ಎನ್​ಐಸಿ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಜೊತೆ ಸಮಸ್ಯೆ ಬಗ್ಗೆ ಚರ್ಚಿಸಿದ್ದೇವೆ. ರಾಷ್ಟ್ರೀಯ ಮಾಹಿತಿ ಕೇಂದ್ರದ ಮೂಲಕ ತಂತ್ರಾಂಶ ಅಭಿವೃದ್ಧಿಪಡಿಸಿದ್ದೇವೆ. ಇದರಿಂದ ರಾಜ್ಯಕ್ಕೆ ನಿರುದ್ಯೋಗ ಸಮಸ್ಯೆ, ಹೆಚ್ಚಿನ ಹೂಡಿಕೆ ಆಕರ್ಷಣೆ ತಂತ್ರಾಂಶ ಉಪಯುಕ್ತ ಆಗುತ್ತೆ. ಸುಸ್ತಿರ ಅಭಿವೃದ್ಧಿಗೆ ಪೂರಕವಾಗಲಿದೆ. ಬೇರೆ ದೇಶ ಅಥವಾ ರಾಜ್ಯದಲ್ಲಿ ಈ ಯೋಜನೆ ಇರುವ ಬಗ್ಗೆ ಮಾಹಿತಿ ಇಲ್ಲ. ನಾವು ಪರಿಣಾಮಕಾರಿಯಾಗಿ ಈ ಉಪಯುಕ್ತ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article