ಇಂಡಿ: ಬೆಂಗಳೂರಿನ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕದ ವತಿಯಿಂದ ವಿಜಯಪುರದ ಎಕ್ಸ್ ಲಂಟ್ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ರವಿವಾರದಂದು ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಲ್ಲಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರಿಗೆ ‘ಜ್ಯೋತಿಬಾ ಫುಲೆ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಿ ಎಸ್ ಕಾಂಬಳೆ,
ಗೌರವಾಧ್ಯಕ್ಷ ಪ್ರಭುಗೌಡ ಪಾಟೀಲ, ಶಿವಾನಂದ ಕಲ್ಯಾಣಿ, ಅನ್ನಪೂರ್ಣ ಬೆಳ್ಳೆನ್ನವರ, ಬಿ ಎಚ್ ನಾಡಗೀರ, ಡಾ ಸಿದ್ದಣ್ಣ ಬಾಡಗಿ, ಕಲ್ಲಪ್ಪ ತೊರವಿ, ಬಸವರಾಜ ಪೂಜಾರ, ಸಂಜಯ ನಡುವಿನಮನಿ, ಡಾ ನಂದಾ ತಿಕೋಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.