ದೇಶ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಭಾರತ ದೇಶದ ವಿರುದ್ಧವೇ ಹೋರಾಟ ಮಾಡುವೆವು ಎಂಬ ದೇಶ ವಿರೋಧಿ ಹೇಳಿಕೆ ನೀಡಿದ್ದು ಹಾಗೂ ಭಾರತ ದೇಶದ ಸಂವಿಧಾನದ ಮೂಲಕ ರಚನೆಯಾದ ಎಲ್ಲಾ ಅಂಗಗಳನ್ನು ದೋಷಿಸುತ್ತಿದ್ದು,ಇದರ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಗದಗ್ ನಗರ ಮಂಡಲ ವತಿಯಿಂದ ನಗರದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ಮಾಡಲಾಯಿತು.
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ನವೀನ್ ಕೋಟೆಕಲ್ ವಹಿಸಿಕೊಂಡಿದ್ದರು ಪಕ್ಷದ ಹಿರಿಯರಾದ ಎಂಎಸ್ ಕರಿಗೌಡ್ರು ಮಾತನಾಡಿ ದೇಶದ ವಿರುದ್ಧ ಇಂತಹ ಹೇಳಿಕೆ ನೀಡಿರುವುದು ತೀರ್ವವಾಗಿ ಖಂಡಿಸುತ್ತೇವೆ ಹಾಗೂ ಆರ್ ಎಸ್ ಎಸ್ ಬಿಜೆಪಿ ದೇಶದ ಪರವಾಗಿ ಕೆಲಸ ಮಾಡುತ್ತಿದೆ ಅದರ ಜೊತೆಗೆ ವಿರೋಧಿಸುವ ಹೇಳಿಕೆಯನ್ನು ನೀಡಿರುವ ನಿಮಗೆ ಧಿಕ್ಕಾರವಿರಲಿ ಎಂದು ಮಾತನಾಡಿದರು.
ನಗರ ಮಂಡಲ ಅಧ್ಯಕ್ಷ ಮಾತನಾಡಿ ದೇಶ ವಿರೋಧಿ ಮತ್ತು ಭಾರತ ದೇಶದ ಸಂವಿಧಾನದ ಮೂಲಕ ರಚನೆಯಾದ ಎಲ್ಲಾ ಅಂಗಗಳನ್ನು ದೋಷಿಸುತ್ತಿದ್ದು ಇದೊಂದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅವಮಾನಿಸಿದಂತೆ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾನ್ಯ ಸಿಪಿಐ ಸಾಹೇಬರು ರಾಜೀವ್ ಗಾಂಧಿ ಬಡಾವಣೆ ಠಾಣೆ ಗದಗ ಇವರಿಗೆ ದೇಶ ವಿರೋಧಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಗದಗ್ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಅಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಎಂ ಎಂ ಹಿರೇಮಠ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಇರ್ಷಾದ ಮಾನ್ವಿ, ರಾಜ್ಯ ಹಿಂದುಳಿದ ವರ್ಗ ಮೋರ್ಚಾ ಕಾರ್ಯದರ್ಶಿ ಸುಧೀರ್ ಕಾಟಿಗರ, ನಗರಸಭೆ ಸದಸ್ಯರಾದ ವಿನಾಯಕ್ ಮಾನ್ವಿ ನಾಗರಾಜ್ ತಳವಾರ್ ಮಾಧುಸಾ ಮೆರರ್ವಾಡೆ ರಾಘವೇಂದ್ರ ಯಳವತ್ತಿ ಮುತ್ತು ಮುಸಿಗೇರಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಶಂಕರ ಕರಬಿಠಿ ಶಂಕರ್ ಮಲ್ಸಮುದ್ರ, ಯುವ ಮೋರ್ಚಾ ಪದಾಧಿಕಾರಿಗಳಾದ ಕಿರಣ್ ಕಲಾಲ ಪ್ರವೀಣ್ ಹಡಪದ್ ರಾಜು ರೊಟ್ಟಿ ಸಚಿನ್ ಮಡಿವಾಳರ ಕೃಷ್ಣ ಚಿಂತಾ ವಿನಾಯಕ್ ಕಟವಾ ರಾಹುಲ್ ಸಂಕಣ್ಣವರ್ ಶ್ರೀಕಾಂತ್ ಆದ್ಯಪ್ಪನವರ್ ಇನ್ನು ಹಲವರು ಉಪಸ್ಥಿತರಿದ್ದರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ನೆರೆಗಲ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.