ಸಂಸದೀಯ ಬಜೆಟ್​ ಅಧಿವೇಶನ ಜನವರಿ 31ರಿಂದ ಆರಂಭ!

Ravi Talawar
ಸಂಸದೀಯ ಬಜೆಟ್​ ಅಧಿವೇಶನ ಜನವರಿ 31ರಿಂದ ಆರಂಭ!
WhatsApp Group Join Now
Telegram Group Join Now

ನವದೆಹಲಿ: ಸಂಸದೀಯ ಬಜೆಟ್​ ಅಧಿವೇಶನ ಜನವರಿ 31ರಿಂದ ಆರಂಭವಾಗಲಿದ್ದು, ಏಪ್ರಿಲ್​ 4ರವರೆಗೆ ನಡೆಯಲಿದೆ. ಫೆ. 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡಿಸಲಿದ್ದು, ಇದು ಅವರ ಏಂಟನೇ ಬಜೆಟ್​ ಮಂಡನೆಯಾಗಿದೆ.

ಬಜೆಟ್​ ಅಧಿವೇಶನದ ಮೊದಲ ದಿನ ಜನವರಿ 31ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಸಂಸತ್​ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣೆ ಮಾಡಲಿದ್ದು, ಆರ್ಥಿಕ ಸಮೀಕ್ಷೆ ಮಂಡನೆ ಕೂಡ ಆಗಲಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದೀಯ ಸಚಿವ ಕಿರಣ್​ ರಿಜುಜ್​​, ಗೌರವಾನ್ವಿತ ರಾಷ್ಟ್ರಪತಿಗಳು 2025ರ ಜನವರಿ 31ರಂದು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 2025-26ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ಫೆ 1ರಂದು ಲೋಕಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬಜೆಟ್​​ ಅಧಿವೇಶನದ ಮೊದಲ ಭಾಗ ಜನವರಿ 31ರಿಂದ ಫೆಬ್ರವರಿ 13ರವರೆಗೆ 9ದಿನಗಳ ಕಾಲ ನಡೆಯಲಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸಲಿದ್ದು, ಸೀತಾರಾಮನ್​ ಅವರು ಬಜೆಟ್​ ಚರ್ಚೆಗೆ ಉತ್ತರಿಸಲಿದ್ದಾರೆ.

ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲು ಸಂಸತ್​​ ವಿರಾಮ ಪಡೆಯಲಿದ್ದು, ಮತ್ತೆ ಮಾರ್ಚ್​ 10ರಿಂದ ಆರಂಭವಾಗಲಿದ್ದು, ಈ ವೇಳೆ ಬಜೆಟ್​​ ಪ್ರಸ್ತಾವನೆಗಳ ಪೂರ್ಣಗೊಳಿಸುವುವಿಕೆ ಹಾಗೂ ನಿಧಿ ಹಂಚಿಕೆ ಬೇಡಿಕೆ ವಿಚಾರದಲ್ಲಿ ಚರ್ಚೆಗಳು ಸಾಗಲಿದೆ. ಈ ಅಧಿವೇಶನ ಏಪ್ರಿಲ್​ 4ರಂದು ಪೂರ್ಣಗೊಳ್ಳಲಿದ್ದು, ಒಟ್ಟು 27 ದಿನ ಸಾಗಲಿದೆ. (ಪಿಟಿಐ)

WhatsApp Group Join Now
Telegram Group Join Now
Share This Article