ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿAಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀಶೈಲ ಶ್ರೀಗಳು ಮಾತನಾಡಿದರು.

Abushama Hawaldar
ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿAಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀಶೈಲ ಶ್ರೀಗಳು ಮಾತನಾಡಿದರು.
WhatsApp Group Join Now
Telegram Group Join Now

ಇಂಡಿ : ಗೋಳಸಾರ ಮಠಕ್ಕೆ ಧನಕ್ಕಿಂತಲೂ ಧರ್ಮ ಮತ್ತು ದೇಶಾಭಿಮಾನ ಬೆಳೆಸುವ ಕಾರ್ಯ ಮುಖ್ಯವಾಗಿದೆ. ಸಾಮಾಜಿಕ, ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯ ಮಾಡುವ ಮೂಲಕ ಗೋಳಸಾರ ಮಠದ ಕಾರ್ಯ ಶ್ಲಾಘನೀಯ ಎಂದು ಶ್ರೀ ಶ್ರೀ ಶ್ರೀ ೧೦೦೮ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಗೋಳಸಾರದ ಪೂಜ್ಯ ಪುಂಡಲಿAಗ ಶಿವಯೋಗಿಗಳ ಮಠದಲ್ಲಿ ನಡೆದ ಸಾಮೂಹಿಕ ವಿವಾಹ, ಧರ್ಮಸಭೆ ಮತ್ತು ಸದ್ಗುರು ಚಿನ್ಮಯ ಮೂರ್ತಿ ತ್ರಿಮೂರ್ತಿ ಶ್ರೀಗಳ ೩೧ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಗೋಳಸಾರ ಮಠ ಸ್ವ ಧರ್ಮ ನಿಷ್ಠೆಯಾಗಿ, ಪರ ಧರ್ಮದ ಸಹಿಷ್ಠುತೆಯಾಗಿ ಪ್ರೀತಿಯಿಂದ ಧರ್ಮ ಮಾರ್ಗದಲ್ಲಿ ಧೇಶಾಭಿಮಾನ ಬೆಳೆಸುವ ಸಂಸ್ಕೃತಿ ಉಳಿಸುವ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.

ಗೋಳಸಾರ ಮಠ ಪಂಚ ಪೀಠಗಳ ಅಥವಾ ಯಾವದೇ ಪರಂಪರೆಯ ಶಾಖಾ ಮಠ ಅಲ್ಲ. ಶ್ರೀಶೈಲ ಪೀಠದ ಶಾಖಾ ಮಠವೂ ಅಲ್ಲ, ಆದರೆ ಎಲ್ಲ ಪರಂಪರೆಯನ್ನು ಪ್ರೀತಿಸುವ ಶ್ರೀಶೈಲ ಪೀಠದ ಖಾಸಾ ಮಠವಾಗಿದೆ ಎಂದು ಪ್ರಶಂಸಿದರು.
ಇAದು ಸಾಮೂಹಿಕ ವಿವಾಹದಲ್ಲಿ ೩೫ ಜೋಡಿಗಳು ಪಾಲ್ಗೊಂಡಿದ್ದು ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ ಅದು ಭಾಗ್ಯವಂತರ ಮದುವೆ. ಇಲ್ಲಿ ಹರ ಗುರು ಚರಣರು, ಸಾವಿರಾರು ಜನರ ನಡುವೆ ನಡೆಯುವ ಸಾಮೂಹಿಕ ವಿವಾಹ ಇದು ಭಾಗ್ಯವಂತರ ಮದುವೆ ಎಂದರು.

ಶಾಸಕ ಯಶವಂತಗೌಡ ಪಾಟೀಲರು ಮಾತನಾಡಿ ಇಂದು ಜಗತ್ತು ಇಲ್ಲಿಯ ಸಂಸ್ಕೃತಿಯತ್ತ ಗಮನಿಸುತ್ತಿದೆ. ಯುವಕರು ಪಾಚ್ಶಿಮಾತ್ಯ ಸಂಸ್ಕೃತಿಗೆ ಬಲಿಯಾಗುತ್ತಿದ್ದು ಗೋಳಸಾರ ಮಠ ಸಂಸ್ಕೃತಿ ಕಾರ್ಯ ಮಾಡುತ್ತಿದ್ದು ಕೊಪ್ಪಳ ಗವಿಸಿದ್ದೇಶ್ವರ ಮಠ ಸೇರಿದಂತೆ ಧರ್ಮ ದೇಶಾಭಿಮಾನಿ ಬೆಳೆಸುವಲ್ಲಿ ಮೂರನೆಯ ಸ್ಥಾನದಲ್ಲಿದ್ದ ಮಠವಾಗಿದೆ ಎಂದರು.
ಇAದು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ನವದಂಪತಿಗಳ ಜೀವನ ಬದುಕು ಆದರ್ಶವಾಗಿರಲಿ,ಆದರ್ಶ ಬದುಕು ಶಾಂತಿ ಕೊಡುವ ಮೂಲಕ ಹೆಮ್ಮೆಯ ನವ ಜೀವನ ಸಾಗಿಸಲಿ ಎಂದರು.
ಮದನೂರದ ತಪೋಬಾಸ್ಕರ ಸಿದ್ದ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರರು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಯು.ಎನ್.ಕುಂಟೋಜಿ, ಎ.ಎಸ್.ಪಾಸೋಡಿ, ಎ.ಪಿ.ಕಾಗವಾಡಕರ, ಶಿಕ್ಷಕ ರವಿ ಆಳೂರ ಮಾತನಾಡಿದರು.
ವೇದಿಕೆಯ ಮೇಲೆ ಲಚ್ಯಾಣ ಬಂಥನಾಳ ಪೀಠದ ವೃಷಭಲಿಂಗೇಶ್ವರ ಶ್ರೀಗಳು, ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು,ಜೈನಾಪುರದ ರೇಣುಕಾ ಶ್ರೀಗಳು, ಶಿರವಾಳದ ಸೋಮನಿಂಗ ಮಹಾರಾಜರು, ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ದಯಾಸಾಗರ ಪಾಟೀಲ, ಬಾಬು ಸಾವಕಾರ ಮೇತ್ರಿ ಮಲ್ಲಿಕಾರ್ಜುನ ವಗ್ಗರ ಮತ್ತಿತರಿದ್ದರು.
ಇದೇ ವೇಳೆ ಡಾ. ಸೋಮನಾಥ ಯಾಳವಾರರವರು ಬರೆದ ಗುರು ಪುಂಡಲಿAಗ ಲೀಲಾಮೃತ ಪುಸ್ತಕ ಬಿಡುಗಡೆ ಗೊಳಿಸಲಾಯಿತು. ನಿವೃತ್ತ ಉಪನ್ಯಾಸಕ ಯು.ಎನ್.ಕುಂಟೋಜಿ ಗ್ರಂಥ ಪರಿಚಯಿಸಿದರು.
ಇದೇ ವೇಳೆ ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿಯನ್ನು ಸಾಹಿತ್ಯ ಮತ್ತು ಸೇವಾ ಕ್ಷೇತ್ರಕ್ಕಾಗಿ ಜಿ.ಎನ್.ತೆಗ್ಗೆಳ್ಳಿ, ಸಂಗೀತ ಕ್ಷೇತ್ರಕ್ಕಾಗಿ ಡಾ. ಶರಣಪ್ಪ ಮೆಡೆದಾರ, ವೈದ್ಯಕೀಯ ಕ್ಷೇತ್ರದ ಡಾ|| ಮಹೇಂದ್ರ ಕಾಪಸೆ, ಕೃಷಿ ಕ್ಷೇತ್ರದ ರಾಜಶೇಖರ ನಿಂಬರಗಿ, ಕ್ರೀಡಾ ಕ್ಷೇತ್ರದ ಕುಮಾರ ಚಂದ್ರಕಾAತ ಬಡದಾಳ ಇವರನ್ನು ಸನ್ಮಾನಿಸಲಾಯಿತು.

WhatsApp Group Join Now
Telegram Group Join Now
Share This Article