ಬಳ್ಳಾರಿ ರಾಘವರು ರಂಗಭೂಮಿಯ ಅನರ್ಘ್ಯ ರತ್ನ

Ravi Talawar
ಬಳ್ಳಾರಿ ರಾಘವರು ರಂಗಭೂಮಿಯ ಅನರ್ಘ್ಯ ರತ್ನ
WhatsApp Group Join Now
Telegram Group Join Now
ಬಳ್ಳಾರಿ ರಾಘವರು ಬಹುಮುಖಿ ನಟ ,ನಿರ್ದೇಶಕ,ಬರಹಗಾರ, ವಕೀಲ ಮಾತ್ರವಲ್ಲದೆ ಅವರು ಸರ್ವ ಶ್ರೇಷ್ಠ ಮಾನವತಾವಾದಿ ಯಾಗಿದ್ದರು. ಅಂದಿನ ಕಾಲದ ಸಾಮಾಜಿಕ ಆತ್ಮಸಾಕ್ಷಿಯ ಪ್ರಜ್ಞೆಯಾಗಿದ್ದರು
ಎಂದು ಲೇಖಕ ಸಿದ್ದರಾಮ ಕಲ್ಮಠ ಅಭಿಪ್ರಾಯ ಪಟ್ಟರು.
ಅವರು ನಗರದ  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ(ಮಾ. ಪು) ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ “ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ಟಿ .ರಾಘವಾಚಾರ್ಯ” ಅವರ ದತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಪ್ರಖ್ಯಾತ ನಾಟಕಕಾರ ಜಾರ್ಜ್ ಬರ್ನಾಡ್ ಶಾ ಅವರನ್ನು ಭೇಟಿಯಾಗಿ ಪಾಶ್ಚಿಮಾತ್ಯ ರಂಗಭೂಮಿಯ ಬಗ್ಗೆ ಚರ್ಚೆ ನಡೆಸಿದರು ಬರ್ನಾಡ್ ಶಾ ಅವರು ರಾಘವರನ್ನು ಕುರಿತು  ಶೇಕ್ಸಪಿಯರ್ ನಾಟಕಗಳನ್ನು ಬರೆದಿದ್ದಾರೆ ಆದರೆ ಅದಕ್ಕೆ ತಕ್ಕ ಅಭಿನಯ ಚತುರತೆ ನಿಮ್ಮಲ್ಲಿದೆ ಎಂದು ಶ್ಲಾಘಿಸಿದರು.
ರಾಘವರು ನಾಟಕಗಳ ಮೂಲಕ ಸಮಾಜದಲ್ಲಿದ್ದ ಮೂಢನಂಬಿಕೆ ಅಸ್ಪೃಶ್ಯತೆ ಮತ್ತು ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಲು ಪರಿಶ್ರಮಿಸಿದರು.ಅವರಿಗೆ ಆಧುನಿಕ ರಂಗಭೂಮಿಯ ಬಗ್ಗೆ ಸ್ವಷ್ಟ ನಿಲುವುಗಳಿದ್ದವು.ಕಲಾವಿದರಿಗೆ ಸೂಕ್ತ ರಂಗ ಶಿಕ್ಷಣದ ಅವಶ್ಯಕತೆ ಇದೆಯೆಂದೂ ,ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ಅಭಿನಯಿಸಬೇಕೆಂದರು. ವರ್ತಮಾನದ ವಸ್ತು ವಿಷಯಗಳ ನಾಟಕಗಳನ್ನು ತೆರೆಯ ಮೇಲೆ ತಂದರು.ಅವರು ದೇಶ ವಿದೇಶಗಳನ್ನು ಪರ್ಯಟನೆ ಮಾಡಿದರಲ್ಲದೆ ಅವರಿಗೆ ಅನೇಕ ಭಾಷೆಗಳ ಮೇಲೆ ಹಿಡಿತವಿತ್ತು. ವಿವಿಧ ಭಾಷೆಗಳ 60 ನಾಟಕಗಳಲ್ಲಿ ಅವರು ಅಭಿನಯಿಸಿದರು. ಸಾರಂಗಧರ , ಕಬೀರ, ಹಿರಣ್ಯಕಶ್ಯಪು ,ಶಿವಾಜಿ,ಚಾಣಕ್ಯ , ಹರಿಶ್ಚಂದ್ರ, ಕರ್ಣ ,ಹ್ಯಾಮ್ಲೆಟ್, ಮ್ಯಾಕ್ ಬೆತ್ ಹೀಗೆ ವಿಭಿನ್ನ ಪಾತ್ರಗಳನ್ನು ಅಭಿನಯಿಸಿ ರಂಗಭೂಮಿಯ ಅನರ್ಘ್ಯ ರತ್ನವಾಗಿ ವಿಶ್ವ ರಂಗಭೂಮಿಗೆ ಅತಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ ಚೆನ್ನಪ್ಪ ಹಾಡು ಮುಟ್ಟದ ಸೊಪ್ಪಿಲ್ಲ ರಾಘವರು ಅಭಿನಯಸದ ಪಾತ್ರಗಳಿಲ್ಲ, ಅವರು ಕಲೆ ವಿಲಾಸಕಲ್ಲ ವಿಕಾಸಕ್ಕಾಗಿ ಎಂಬ ರಂಗಭೂಮಿಯ ಸೂತ್ರವನ್ನು ತಿಳಿಸಿಕೊಟ್ಟರು.ಕನ್ನಡ ಮತ್ತು ತೆಲುಗು ನಾಟಕ ರಂಗಕ್ಕೆ ಅವರು ಸಲ್ಲಿಸಿದ ಸೇವೆ ಅನನ್ಯವಾದದು ಎಂದು ಅವರು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಚಾರ್ಯರಾದ ಪಿ ನಾಗೇಶ್ವರರಾವ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಾರ್ಯದರ್ಶಿ ಎನ್ . ಪ್ರಕಾಶ್, ನಿವೃತ್ತ ಉಪನ್ಯಾಸಕ ಎನ್ ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ,ಪತ್ರಕರ್ತ ಪ್ರಭಾಕರ, ಕೆ ಸುಂಕಪ್ಪ ,ಶಿವೇಶ್ವರಗೌಡ ಕಲ್ಲುಕಂಬ , ತೆಂಗಿನಕಾಯಿ ಮಲ್ಲಿಕಾರ್ಜುನ, ಬಿ ರಮಣಪ್ಪ, ಟಿ. ತಿಮ್ಮಪ್ಪ,ಬಿ ಹನುಮಂತ ರಾವ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರೆಡ್ಡಿ ಕೆ. ವಿ .ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ನಿರೂಪಿಸಿದರು.
WhatsApp Group Join Now
Telegram Group Join Now
Share This Article