ನೇಸರಗಿ. ಸಮೀಪದ ನಾಗನೂರ ಗ್ರಾಮದಲ್ಲಿ ಪಂಚಾಯತ್ ರಾಜ ಇoಜಿನಿಯರಿಂಗ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 28 ಲಕ್ಷ ರೂಪಾಯಿಗಳ ಅನುಧಾನದಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರದ ಉದ್ಘಾಟನೆ, ಹೈಸ್ಕೂಲ್ ಹಿಂದುಗಡೆ 10 ಲಕ್ಷ ರೂಪಾಯಿಗಳ ಅನುಧಾನದಲ್ಲಿ ಮೆಟಲಿಂಗ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ, ಶ್ರೀ ಕಲ್ಮೇಶ್ವರ ದೇವಸ್ಥಾನ ರಸ್ತೆ ಸಿ ಸಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂಪಾಯಿಗಳ ಅನುದಾನದ ಕಾಮಗಾರಿಗೆ ಭೂಮಿ ಪೂಜೆ, ನೂತನ ಅಂಗನವಾಡಿ ನಿರ್ಮಾಣ 25 ಲಕ್ಷ ರೂಪಾಯಿಗಳ ಅನುಧಾನದ ಕಾಮಗಾರಿಗೆ ಭೂಮಿ ಪೂಜೆಯನ್ನು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ. ಅಧ್ಯಕ್ಷ ಶ್ರೀಮತಿ ಬಸವ್ವ ಶಿರಸಂಗಿ, ಸದಸ್ಯರಾದ ಸಚಿನ ತಲ್ಲೂರ, ಬಸವರಾಜ ಉಣಕಲ, ನವೀನ್ ಗದಗ, ಮಹಾಭಾಳೇಶ್ವರ ತಿಗಡಿ, ಅದ್ರಶ್ಯ ಪತ್ತಾರ, ಸಿದ್ದು ಸುಂಕದ, ಮಹೇಶ್ ಪಾಟೀಲ, ಸಿದ್ರಾಮ ತಲ್ಲೂರ , ಪಿ ಡಿ ಓ ಗಂಗಪ್ಪ ಮರೆನ್ನವರ, ಎ ಇ ಇ ಮಹೇಶ್ ಹೊಲಿ ಗುತ್ತಿಗೆದಾರ ಸುರೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.