ಗದಗ, 15 : ಜಿಲ್ಲೆಗೆ ನೂತನವಾಗಿ ಆಗಮಿಸಿ ಗದಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಂತಹ ಸಿ ಎನ್ ಶ್ರೀಧರ್, IಂS ಅವರಿಗೆ ಮಾಜಿ ಹಾಗೂ ಹಾಲಿ ಪ್ಯಾರಾ ಮಿಲಿಟರಿ ಯೋಧರ ಕಲ್ಯಾಣ ಸಂಘ ಗದಗ ಜಿಲ್ಲೆಯ ವತಿಯಿಂದ ಸಂಘದ ಅಧ್ಯಕ್ಷರಾದ ನಾಗರಾಜ ಕುಂದರಗಿ ಅವರು ಜಿಲ್ಲಾಧಿಕಾರಿ ಅವರಿಗೆ ಸ್ವಾಗತವನ್ನು ಕೋರಿ ಪ್ಯಾರಾ ಮಿಲಿಟರಿ ಸೈನಿಕರ ಪ್ಯಾರಾ ಮಿಲಿಟರಿ ಮಾಜಿ ಸೈನಿಕರ ಹಾಗೂ ಪ್ಯಾರಾ ಮಿಲಿಟರಿ ವೀರನಾರಿಯರ ಹಲವಾರು ಬೇಡಿಕೆಗಳ ಮನವಿ ನೀಡಿದರು
ಈ ಸಂದರ್ಭದಲ್ಲಿ ಪ್ಯಾರಾ ಮಿಲಿಟರಿ ವೀರನಾರಿಯರಾದ ಶ್ರೀಮತಿ ಗೀತಾ ತಹಶೀಲ್ದಾರ್, ಶ್ರೀಮತಿ ಸಿಮ್ರನ್ ಕಲೆಬಾವಿ, ಸಂಘದ ಗೌರವಾಧ್ಯಕ್ಷರಾದ ವಿ. ಎಸ್ ಅಕ್ಕಿ, ಕಾರ್ಯದರ್ಶಿಯಾದ. ಬಸಯ್ಯ ಹಿರೇಮಠ, ಮಲ್ಲಯ್ಯ ಕರವಿರಮಠ, ಮಹಾಂತೇಶ ಲಕ್ಕುಂಡಿ, ಈಶ್ವರಪ್ಪ ಕರ್ಕಿಕಟ್ಟಿ, ಈಶ್ವರ ಚಂದ್ರಬಾಗಲಿ ಮಲ್ಲಿಕಾರ್ಜುನ ಮಲ್ಲನಗೌಡ. ಮುತ್ತಣ್ಣ, ದಾವಲ್ಸಾಬ್ ಕಿಲ್ಲೆದಾರ್, ಮಲ್ಲಪ್ಪ ಆದಮ್ನವರ, ಸೋಮನಗೌಡ ಪಾಟೀಲ ಸೇರಿದಂತೆ ಇನ್ನೂ ಹಲವಾರು ಪ್ಯಾರಾಮಿಲಿಟರಿ ಮಾಜಿ ಸೈನಿಕರು ಉಪಸ್ಥಿತರಿದ್ದರು.