ಬೆಳಗಾವಿ: ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ) ಬೆಳಗಾವಿ ಸಂಸ್ಥೆಯ ತನ್ನ ರಜತ ಮಹೋತ್ಸವದ ನಿಮಿತ್ಯ ಪ್ರತಿ ವರ್ಷದಂತೆ 2024ನೇ ಸಾಲಿನಲ್ಲಿ ಪ್ರಕಟಗೊಂಡ ಕವನ, ಕಥೆ, ಕಾದಂಬರಿ, ಪ್ರಬಂಧ ಮತ್ತು ಮಕ್ಕಳ ಸಾಹಿತ್ಯ ಕೃತಿಗಳಿಗೆ ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ ನೀಡಲು ಉದ್ದೇಶಿಸಿದೆ. ಆಸಕ್ತ ಸಾಹಿತಿಗಳು 2024ರಲ್ಲಿ ಪ್ರಥಮ ಆವೃತಿಯಾಗಿ ಪ್ರಕಟಗೊಂಡ ಕೃತಿಗಳನ್ನು ತ್ರಿಪ್ರತಿಗಳಲ್ಲಿ “ಆರ್.ಬಿ ಬನಶಂಕರಿ ಕಾರ್ಯದರ್ಶಿಗಳು ಹೊಂಬೆಳಕು ಸಾಂಸ್ಕೃತಿಕ ಸಂಘ #77ʼಶ್ರೀ ಶಾಕಾಂಬರಿʼ ಸಂಕಲ್ಪ ಲೇಔಟ್ ವಿಜಯನಗರ, ಬೆಳಗಾವಿ-591108” ಈ ವಿಳಾಸಕ್ಕೆ ದಿ:16-02-2025ರೊಳಗಾಗಿ ಕಳುಹಿಸಿಕೊಡಲು ಸಂಘದ ಅಧ್ಯಕ್ಷರಾದ ಸ.ರಾ.ಸುಳಕೂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರೊ.ಶಶಿಕಲಾ ಪಾವಸೆ, ಉಪಾಧ್ಯಕ್ಷರು ಮೊಬೈಲ್ ಸಂಖ್ಯೆ 9481854326, ಆರ್.ಬಿ ಬನಶಂಕರಿ ಮೊಬೈಲ್ ಸಂಖ್ಯೆ 9449479456 ಇವರನ್ನು ಸಂಪರ್ಕಿಸಲು ಕೋರಲಾಗಿದೆ.