ಹಿಂಡನ್​ಬರ್ಗ್ ರಿಸರ್ಚ್​​ ಸ್ಥಗಿತ: ಸಂಸ್ಥಾಪಕರಿಂದ ಘೋಷಣೆ

Ravi Talawar
ಹಿಂಡನ್​ಬರ್ಗ್ ರಿಸರ್ಚ್​​ ಸ್ಥಗಿತ: ಸಂಸ್ಥಾಪಕರಿಂದ ಘೋಷಣೆ
WhatsApp Group Join Now
Telegram Group Join Now

ನವದೆಹಲಿ: ಜಗತ್ತಿನ ಪ್ರಮುಖ ಕಾರ್ಪೊರೇಟರ್​ ಗುರಿಯಾಗಿಸಿ ವರದಿ ಮಾಡಿ, ಆರ್ಥಿಕ ತಲ್ಲಣಕ್ಕೆ ಕಾರಣವಾಗಿ ಸದ್ದು ಮಾಡಿದ್ದ ಹಿಂಡನ್​ ಬರ್ಗ್​ ಸಂಶೋಧನಾ ಘಟಕವನ್ನು ಮುಚ್ಚುವುದಾಗಿ ಅದರ ಸಂಸ್ಥಾಪಕ ನಾಟೆ ಆ್ಯಂಡರ್ಸನ್​ ಘೋಷಿಸಿದ್ದಾರೆ.

ಅಮೆರಿಕ ಮೂಲದ ಸಣ್ಣ ಮಾರಾಟ ಘಟಕವಾಗಿರುವ ಹಿಂಡನ್​ ಬರ್ಗ್​ ಅನ್ನು ವಿಸರ್ಜಿಸಲಾಗುತ್ತಿದ್ದು, ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣ ಇಲ್ಲ. ಯಾವುದೇ ಬೆದರಿಕೆ, ಯಾವುದೇ ಆರೋಗ್ಯ ಸಮಸ್ಯೆ ಮತ್ತು ಯಾವುದೇ ದೊಡ್ಡ ವೈಯಕ್ತಿಕ ಸಮಸ್ಯೆಯೂ ಇಲ್ಲ ಎಂಬುದನ್ನು ಸಂಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ಭಾರತ ಸೇರಿದಂತೆ ಜಗತ್ತಿನ ಅನೇಕ ಕಾರ್ಪೊರೇಟ್​ ಉದ್ಯೋಗಿಗಳ ಕುರಿತು ಹಿಂಡನ್​ ಬರ್ಗ್​ ಮಾಡಿದ ವರದಿ ಆರ್ಥಿಕ ಸಂದಿಗ್ಧತೆಗೂ ಕೂಡ ಕಾರಣವಾಗಿತ್ತು.

ಸಂಸ್ಥೆ ಮುಚ್ಚುವ ಕುರಿತು ತಮ್ಮ ವೆಬ್​ಸೈಟ್​ನಲ್ಲಿ ಪೋಸ್ಟ್​ ಮಾಡಿರುವ ಆ್ಯಂಡರ್ಸನ್​, ಜಗತ್ತಿನಲ್ಲಿ ಅನೇಕ ವಿಚಾರಗಳನ್ನು ಹಾಗೂ ನಾನು ಕಾಳಜಿ ವಹಿಸುವ ವ್ಯಕ್ತಿಗಳನ್ನು ನಾನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನನ್ನ ಜೀವನದಲ್ಲಿ ಹಿಂಡನ್​ ಬರ್ಗ್​​ ಅಧ್ಯಯನದ ಬಗ್ಗೆ ತಿಳಿದಿದೆ. ಆದರೆ, ಕೇಂದ್ರಿಕೃತ ವಿಚಾರಗಳು ಇವುಗಳನ್ನು ವ್ಯಾಖ್ಯಾನಿಸುವುದಿಲ್ಲ ಎಂದಿದ್ದಾರೆ.

WhatsApp Group Join Now
Telegram Group Join Now
Share This Article