ಸುರ್ಜೆವಾಲಾ ನೇತೃತ್ವದಲ್ಲಿ ಇಂದು 3 ಸಭೆ; ಡಿನ್ನರ್ ಪೊಲಿಟಿಕ್ಸ್ ಚರ್ಚೆಯೂ ಸಾಧ್ಯತೆ

Ravi Talawar
ಸುರ್ಜೆವಾಲಾ ನೇತೃತ್ವದಲ್ಲಿ ಇಂದು 3 ಸಭೆ; ಡಿನ್ನರ್ ಪೊಲಿಟಿಕ್ಸ್ ಚರ್ಚೆಯೂ ಸಾಧ್ಯತೆ
WhatsApp Group Join Now
Telegram Group Join Now

ಬೆಂಗಳೂರು, ಜನವರಿ 13: ಆಂತರಿಕ ಕಲಹ, ಡಿನ್ನರ್ ರಾಜಕಾರಣ, ಆಪರೇಷನ್ ಹಸ್ತ ವಿಚಾರ ಇತ್ಯಾದಿಗಳ ಸದ್ದು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಆಗುತ್ತಿದೆ. ಇದೇ ಹೊತ್ತಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇಂದು ಸೋಮವಾರ ರಾಜ್ಯ ರಾಜಧಾನಿಗೆ ಆಗಮಿಸುತ್ತಿದ್ದು, ಮೂರು ಸಭೆಗಳನ್ನು ನಡೆಸಲಿದ್ದಾರೆ. ಮೂಲಗಳ ಪ್ರಕಾರ, ಸುರ್ಜೆವಾಲ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಆಯೋಜಿಸಿರುವ ಜೈ ಬಾಪು, ಜೈ ಸಂವಿಧಾನ್ ಅಧಿವೇಶನಕ್ಕೆ ಪೂರ್ವಸಿದ್ಧತೆಗೆ ಈ ಸಭೆ ನಡೆಸಲಿದ್ದಾರೆ. ಇದೇ ಹೊತ್ತಲ್ಲಿ, ಕಾಂಗ್ರೆಸ್​ನ ಆಂತರಿಕ ಕಲಹ ಸರಿಪಡಿಸುವ ಪ್ರಯತ್ನವನ್ನೂ ಅವರು ಮಾಡುವ ನಿರೀಕ್ಷೆ ಇದೆ. ಕೆಲಸ ಈ ಸಂದರ್ಭದಲ್ಲಿ ಆಗುವ ನಿರೀಕ್ಷೆ ಇದೆ.

WhatsApp Group Join Now
Telegram Group Join Now
Share This Article