ಪಟ್ಟಣದಲ್ಲಿ ಜಮಾತೆ ಅಹ್ಲೇಹದೀಸ್ ಮತ್ತು ಮರಕಜಿ ಮದಿನಾ ಮಸೀದಿ ಲೋಹಾರ ಗಲ್ಲಿ ವತಿಯಿಂದ ಇಜ್ಲಾಸೆ ಆಮ್ ಇಜ್ತೆಮಾ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಧಾರ್ಮಿಕಗುರುಗಳಾದ ಮೌಲಾನಾ ಅಬ್ದುಲ್ ಘಪ್ಪಾರ್ ಸಲ್ಫಿ ಅವರು “ಮಾನವ ಜೀವನದ ಮೇಲೆ ತೌಹೀದ್ ನ ಭಾವನೆಯ ಪರಿಣಾಮಗಳು ಕುರಿತು ವಿವರಣೆ ನೀಡಿದರು.

Abushama Hawaldar
ಪಟ್ಟಣದಲ್ಲಿ ಜಮಾತೆ ಅಹ್ಲೇಹದೀಸ್ ಮತ್ತು ಮರಕಜಿ ಮದಿನಾ ಮಸೀದಿ ಲೋಹಾರ ಗಲ್ಲಿ ವತಿಯಿಂದ  ಇಜ್ಲಾಸೆ ಆಮ್ ಇಜ್ತೆಮಾ  ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮದ ಧಾರ್ಮಿಕಗುರುಗಳಾದ ಮೌಲಾನಾ ಅಬ್ದುಲ್ ಘಪ್ಪಾರ್  ಸಲ್ಫಿ ಅವರು “ಮಾನವ ಜೀವನದ ಮೇಲೆ ತೌಹೀದ್ ನ ಭಾವನೆಯ ಪರಿಣಾಮಗಳು ಕುರಿತು ವಿವರಣೆ ನೀಡಿದರು.
WhatsApp Group Join Now
Telegram Group Join Now

ಇಂಡಿ: ಯಾವುದೆ ಒಂದು ಭಾಗ ದೇಶ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ. ಆದ್ದರಿಂದ ತಮ್ಮ ಮಕ್ಕಳಿಗೆ ಒಳ್ಳೆಯ ಗುಣ ಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರ ಉಜ್ವಲ ಭವಿಷ್ಯ ರೂಪಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ವಿಧಾನಸಭೆಯ ಅಂದಾಜು ಸ್ಥಾಯಿ ಸಮಿತಿ ಅಧ್ಯಕ್ಷ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಪಟ್ಟಣದಲ್ಲಿ ಜಮಾತೆ ಅಹ್ಲೇಹದೀಸ್ ಮತ್ತು ಮರಕಜಿ ಮದಿನಾ ಮಸೀದಿ ಲೋಹಾರ ಗಲ್ಲಿ ವತಿಯಿಂದ ಇಜ್ಲಾಸೆ ಆಮ್ ಇಜ್ತೆಮಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾರ್ಮಿಕತೆ ನಮ್ಮ ಬದುಕೆಗೆ ಆಧಾರವಾಗಿರಬೇಕು ಶಿಕ್ಷಣ ನಮ್ಮ ಜೀವನದ ಅಂಗವಾಗಿ ಅಳವಡಿಸಿಕೊಳ್ಳಬೇಕು. ಇಂತಹ ವೇದಿಕೆಗಳು ನಮ್ಮ ಬದುಕಿಗೆ ಅಪಾರವಾದ ಜ್ಞಾನವನ್ನು ನಿಡುವುದರಿಂದ ಎಲ್ಲರು ಆ ಭಗವಂತನ ಸ್ವರೂಪಗಳಾಗಿ ಪ್ರಪಂಚದಲ್ಲಿ ವಿಶ್ವ ಮಾನವರಾಗಿ
ಇಂತಹ ಅರ್ಥಪೂರ್ಣವಾದ ಧಾರ್ಮಿಕ ಕಾರ್ಯಕ್ರಮಗಳು ಯುವಕರಿಗೆ ಧಾರಿದೀಪವಾಗಿದ್ದು ಧಾರ್ಮಿಕತೆ ನಮ್ಮ ಬದುಕಿಗೆ ಆಧಾರವಾಗಿರಬೇಕು ಶಿಕ್ಷಣ ಜೀವನದ ಅಂಗವಾದಾಗ ಮಾತ್ರ ಮುಂದೆ ಬರಲು ಸಹಕಾರಿಯಾಗುತ್ತದೆ. ಈ ಧಾರ್ಮಿಕ ವೇದಿಕೆ ಮೂಲಕ ತಮ್ಮಲ್ಲಿ ಮನವಿ ಮಾಕೊಳ್ಳುವುದೆ ಇಷ್ಟೇ. ಇಂದು ನಾವು ಗೂಗಲು ಮೂಲಕ ಸಾಚಾರ, ಶಹಾ ವರದಿಗಳನ್ನು ಸೂಕ್ಷö್ಮವಾಗಿ ಗಮನಿಸಿದಾಗ ಶಿಕ್ಷಣ ವಂಚಿತರಾಗಿದ್ದು ಕಂಡು ಬರುತ್ತದೆ. ಆದ್ದರಿಂದ ಮುಂದಿನ ದಿನಮಾನಗಳಲ್ಲಿ ಶೈಕ್ಷಣಿಕ ಪ್ರಗತಿ ಮುಂದಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಯಾವುದೆ ಭಾಷೆ ಆಗಲ್ಲಿ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿ ಹೆಮ್ಮೆಯಿಂದ ಬದುಕಿ ಎಂದರು.
ಇಸ್ಲಾಂ ಧರ್ಮದ ಧಾರ್ಮಿಕಗುರುಗಳಾದ ಮೌಲಾನಾ ಅಬ್ದುಲ್ ಘಪ್ಪಾರ್ ಸಲ್ಫಿ ಅವರು “ಮಾನವ ಜೀವನದ ಮೇಲೆ ತೌಹೀದ್ ನ ಭಾವನೆಯ ಪರಿಣಾಮಗಳು ಕುರಿತು ವಿವರಣೆ ನೀಡಿದರು.

ಮೌಲಾನಾ ತೌಹೀದ್ ನ ಮಹತ್ವ ಮತ್ತು ಮಾನವ ಜೀವನದ ಮೇಲೆ ಅದರ ಆಳವಾದ ಪರಿಣಾಮಗಳನ್ನು ಕುರಾನ್ ಮತ್ತು ಸುನ್ನತ್ ಬೆಳಕಿನಲ್ಲಿ ಸುಂದರವಾಗಿ ವಿವರಿಸಿದರು.
ಮೌಲಾನಾ ಉಮರ್ ಫಾರೂಕ್ ಮುಹಮ್ಮದಿ ಅವರು “ಕಿಯಾಮತ್ ನ ಭಯಾನಕತೆ” ಎಂಬ ವಿಷಯದ ಮೇಲೆ ಅತೀ ಹೃದಯಸ್ಪರ್ಶಿ ಮತ್ತು ಭಾವನಾತ್ಮಕ ಭಾಷಣ ಮಾಡಿದರು.
ಮೌಲಾನಾ ಮುಫ್ತಿ ಅಬ್ದುರ್ ರಹ್ಮಾನ್ ಕಾಸ್ಮಿ, ಮೌಲಾನಾ ಶಾಕಿರ್ ಹುಸೇನ್ ಕಾಸಿಮಿ ಅವರು ಮಸೀದಿಯ ಮಹತ್ವ ಮತ್ತು ದಾನಧರ್ಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊAಡರು.
ಸಭೆಯ ಅಧ್ಯಕ್ಷತೆಯನ್ನು ಮುಕ್ತಾರ ಅರಬ ಅಮೀರ್ ಜಮಾಅತೆ ಅಹ್ಲೇಹದೀಸ್ ವಿಜಯಪುರ ವಹಿಸಿದರು. ಮೌಲಾನಾ ಜಿಯಾ ಉಲ್ ಹಕ್ ಉಮ್ರಿ, ಅಮೀರ್ ಶಹರಿ ಜಮಾಅತೆ ಅಹ್ಲೇಹದೀಸ್ ಇಂಡಿ ಇದ್ದರು. ಸಭೆಯ ನಿರ್ವಹಣೆಯನ್ನು ಮೌಲಾನಾ ಅಬ್ದುಜೀಜ್ ಫೈಝಿ ಮತ್ತು ಮೌಲಾನಾ ಮುಖ್ತಾರ ಅಹ್ಮದ್ ಉಮ್ರಿ ಸೇರದಂತೆ ಅನೇಕರು ಮಾತನಾಡಿದರು.

WhatsApp Group Join Now
Telegram Group Join Now
Share This Article