ಹುಕ್ಕೇರಿ ಅರ್ಬನ್ ಬ್ಯಾಂಕ ಅದ್ಯಕ್ಷ ರಾಗಿ ಚಂದ್ರಶೇಖರ ಪಾಟೀಲ ಮತ್ತು ಉಪಾದ್ಯಕ್ಷರಾಗಿ ಪ್ರಭು ಸಾಂಬಾರೆ ಅವಿರೋಧ ಆಯ್ಕೆ ಯಾದರು.
ಇಂದು ನಡೆದ ಅದ್ಯಕ್ಷ ಉಪಾದ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ತಲಾ ಒಬ್ಬೋಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ಶಶಿಕಲಾ ಪಾಟೀಲ ಚಂದ್ರಶೇಖರ ಪಾಟೀಲ ಅದ್ಯಕ್ಷ ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಪ್ರಭು ಸಾಂಬಾರೆ ಯವರ ಅವಿರೋಧ ಆಯ್ಕೆ ಘೋಷನೆ ಮಾಡಿದರು.
ನಂತರ ಬ್ಯಾಂಕಿನ ನೂತನ ಅದ್ಯಕ್ಷ ಉಪಾದ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಪ್ರಮಾಣ ಪತ್ರ ವಿತರಿಸಲಾಯಿತು .
ನೂತನ ಅದ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ ಆಡಳಿತ ಮಂಡಳಿ ಸದಸ್ಯರ ,ಸಿಬ್ಬಂದಿಗಳ ಮತ್ತು ಗ್ರಾಹಕರ ಸಹಕಾರದಿಂದ ಬ್ಯಾಂಕ ಅಭಿವೃದ್ಧಿ ಪಥದಲ್ಲಿ ಸಾಗಿಸಲಾಗುವದು ಎಂದರು ( )
2024 ನೇ ಸಾಲಿನ ಚುನಾವಣೆ ಪ್ರಕ್ರಿಯೆ ಯನ್ನು ಸರಳ ಮತ್ತು ಯಶಸ್ವಿಯಾಗಿ ಜರುಗಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣೆ ಅಧಿಕಾರಿ ಶಶಿಕಾಲಾ ಪಾಟೀಲ ಇವರನ್ನು ಸಂಸ್ಥೆ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ಸೋಮಣ್ಣಾ ಗಂಧ, ಮಲ್ಲಿಕಾರ್ಜುನ ತೇರಣಿ, ಶಿವಾನಂದ ನೂಲಿ, ಸೋಮಶೇಖರ ಪಟ್ಟಣಶೇಟ್ಟಿ, ಚಂದ್ರಶೇಖರ ಪಾಟೀಲ, ಶಂಕರಗೌಡಾ ಪಾಟೀಲ, ಸುಭಾಷ ಪಾಟೀಲ, ವಿಜಯ ರವದಿ, ಸಿದ್ದೇಶ್ವರ ಹೆದ್ದೂರಶೇಟ್ಟಿ, ಗೌರವ್ವಾ ನಾಯಿಕ , ಸುವರ್ಣಾ ಹುಂಡೆಕಾರ , ಮೌನೇಶ ಪೋತದಾರ , ರಾಜು ಬಾಗಲಕೋಟಿ, ಮಲ್ಲಿಕಾರ್ಜುನ ಕೋಟ್ಯಾಗೋಳ, ಪ್ರಭು ಸಾಂಬಾರೆ, ವ್ಯವಸ್ಥಾಪಕ ಕೆ ಬಿ ಬಂದಾಯಿ ಉಪಸ್ಥಿತರಿದ್ದರು.
ನಂತರ ನೂತನ ಅದ್ಯಕ್ಷ ಉಪಾದ್ಯಕ್ಷರಿಗೆ ನಗರದ ಪ್ರಮುಖರು ಶುಭಾಶಯ ಕೋರಿ ಅಭಿನಂದಿಸಿದರು.