ಬಳ್ಳಾರಿ ನಗರದಲ್ಲಿ ಮೂರು ದಿನಗಳ ಕಬಡ್ಡಿ ಪಂದ್ಯಾವಳಿ ಮುಕ್ತಾಯ

Ravi Talawar
ಬಳ್ಳಾರಿ ನಗರದಲ್ಲಿ ಮೂರು ದಿನಗಳ ಕಬಡ್ಡಿ ಪಂದ್ಯಾವಳಿ ಮುಕ್ತಾಯ
WhatsApp Group Join Now
Telegram Group Join Now
ಮೂರು ದಿನಗಳ ಈ ಕಬಡ್ಡಿ ಪಂದ್ಯಾವಳಿಗಳಲ್ಲಿ ಪ್ರತಿಯೊಂದು ಪಂದ್ಯದಲ್ಲಿ ಸೃಜನಾತ್ಮಕವಾಗಿ ಆಟವಾಡಿ, ಚಾಣಾಕ್ಷದಿಂದ ಅತ್ಯುತ್ತಮ ರೈಡರ್ ಆಗಿ ಅಂಕಗಳನ್ನು ಗಳಿಸಿದ ಕೀರ್ತಿ ಆಳ್ವಾಸ್ ಕಾಲೇಜಿನ ಕಬಡ್ಡಿ ಪ್ರತಿಭೆ ಶ್ರೀನಿವಾಸ್ ಹೊಸಮನೆ ಅವರಿಗೆ ಸಲ್ಲುತ್ತದೆ.
ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ತುಂಗಭದ್ರಾ ಸಿರುಗುಪ್ಪ ತಂಡಕ್ಕೆ ಜಯ, ಕೊಟ್ಟೂರು ತಂಡ ಎರಡನೇ ಸ್ಥಾನ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಬಳ್ಳಾರಿ ಯೋಧ ತಂಡಕ್ಕೆ ಪ್ರಥಮ ಸ್ಥಾನ, ಹಗರಿಬೊಮ್ಮನಹಳ್ಳಿ ತಂಡ ಎರಡನೇ ಸ್ಥಾನ.
ನಗರದ ಗಾಂಧೀ ಭವನದಲ್ಲಿ ಒಳಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಆಮೇಚೂರು ಕಬಡ್ಡಿ ಅಸೋಸಿಯೇಷನ್ ಹಾಗೂ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಮಹಿಳಾ ಹಾಗೂ ಪುರುಷರ ಕಬಡ್ಡಿ ಪಂದ್ಯಾವಳಿ- 2024 ಮೂರು ದಿನಗಳ ಕಾಲ ಉತ್ತಮವಾಗಿ ನಡೆಯಿತು.
ಬಳ್ಳಾರಿ, ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು, ಬಳ್ಳಾರಿ ಗ್ರಾಮೀಣ ಮತ್ತು ಹರಪನಹಳ್ಳಿ  ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಲೀಗ್, ಸೆಮಿಫೈನಲ್ ಹಾಗೂ ಫೈನಲ್ ಸೇರಿ ಒಟ್ಟು 48 ಕಬಡ್ಡಿ ಪಂದ್ಯಾವಳಿಗಳು ಮೂರು ದಿನಗಳ ಕಾಲ ನಿರಂತರವಾಗಿ ನಡೆದವು.
ಮಹಿಳಾ ಕಬಡ್ಡಿ ಫೈನಲ್ ಪಂದ್ಯದಲ್ಲಿ ಹಗರಿಬೊಮ್ಮನಹಳ್ಳಿ ತಂಡ ಹಾಗೂ ಬಳ್ಳಾರಿ ಯೋಧ ತಂಡ  ಇಬ್ಬರ ನಡುವೆ ನಡೆಯಿತು. ಬಳ್ಳಾರಿ ಯೋಧ ತಂಡ 23 ಅಂಕ, ಹಗರಿಬೊಮ್ಮನಹಳ್ಳಿ ತಂಡ 9 ಅಂಕ ಪಡೆದು, 14 ಅಂಕಗಳ ಅಂತರದಲ್ಲಿ ಬಳ್ಳಾರಿ ಯೋಧ ಮಹಿಳಾ ತಂಡ ಫೈನಲ್ ಪಂದ್ಯದಲ್ಲಿ ಜಯಗಳಿಸಿತು. ಅತ್ಯುತ್ತಮ ಮಹಿಳಾ ಕಬಡ್ಡಿ ರೈಡರ್ ಆಗಿ ಮಹೇಶ್ವರಿ ಉತ್ತಮ ರೈಡ್ ಗಳನ್ನು ಮಾಡಿದರು.
ತಲಾ 5 ಸಾವಿರ ಪ್ರೋತ್ಸಾಹ ಧನ:
ಫೈನಲ್ ನಲ್ಲಿ ಬಳ್ಳಾರಿ ಯೋಧ ಮಹಿಳಾ ಕಬಡ್ಡಿ ತಂಡದ ಆಟಗಾರರು, ತರಬೇತುದಾರರು ಹಾಗೂ ಮ್ಯಾನೇಜರ್ ಸೇರಿ 14 ಜನರಿಗೆ ತಲಾ 5 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಪಕ್ಷದ ಮುಖಂಡ ಹಳ್ಳಿ ಸಿದ್ದೆಗೌಡ ನೀಡುತ್ತಾರೆ ಎಂದರು. ಮಹಿಳಾ ತಂಡದ ರೈಡರ್  ಮಹೇಶ್ವರಿ ಉತ್ತಮ ರೈಡ್ ಮಾಡಿ ಪಂದ್ಯ ಗೆಲ್ಲಲು ಕಾರಣರಾದರು.
ಮೊದಲನೆ ಸೆಮಿಫೈನಲ್ಸ್ ಪಂದ್ಯದಲ್ಲಿ ಪುರುಷರ  ತುಂಗಭದ್ರ ಸಿರುಗುಪ್ಪ ತಂಡ ಹಾಗೂ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ  ಕೊಟ್ಟೂರು ತಂಡ ಜಯಗಳಿಸಿ ಫೈನಲ್ ಪ್ರವೇಶ ಪಡೆದವು.
ಫೈನಲ್ ಪಂದ್ಯಾವಳಿ ಕೊಟ್ಟೂರು ತಂಡ ಹಾಗೂ ತುಂಗಭದ್ರಾ ಸಿರುಗುಪ್ಪ ನಡುವೆ ನಡೆಯಿತು. ಸಿರುಗುಪ್ಪ ತಂಡದ ಆಟಗಾರ ಶ್ರೀನಿವಾಸ್ ಹೊಸಮನೆ ಅತ್ಯುತ್ತಮ ಪ್ರದರ್ಶನ ನೀಡಿದರು. ಕೊಟ್ಟೂರು ತಂಡ ಫೈನಲ್ ಪಂದ್ಯದಲ್ಲಿ ಸೃಜನಾತ್ಮಕ ಆಟವಾಡಲಿಲ್ಲ, ಇನ್ನು ಕೊಟ್ಟೂರು ತಂಡದ ಉತ್ತಮ ಆಟಗಾರ ಮಂಜು  ಸೆಮಿಫೈನಲ್ಸ್  ಪಂದ್ಯದಲ್ಲಿ ಶೋಲ್ಡರ್ ಸಮಸ್ಯೆ ಉಂಟಾಗಿದ್ದರಿಂದ ಫೈನಲ್ ನಲ್ಲಿ ಸಮಸ್ಯೆ ಆಯಿತು. ಕೊನೆಗೆ ತುಂಗಭದ್ರಾ ಸಿರುಗುಪ್ಪ ತಂಡ 33 ಅಂಕ, ಕೊಟ್ಟೂರು 20 ಅಂಕ ಪಡೆದು, 13 ಅಂತರ ದಿಂದ  ತುಂಗಭದ್ರಾ ಸಿರುಗುಪ್ಪ ತಂಡ ಫೈನಲ್ ಪಂದ್ಯದಲ್ಲಿ ಜಯಗಳಿಸಿದ್ದಾರೆ. ಟ್ರೋಫಿ ಮತ್ತು ಪ್ರಮಾಣಪತ್ರ ವಿತರಣೆ ಮಾಡಿದರು.
*ಬಾಕ್ಸ್ ಮಾಡಿ*
ಅತ್ಯುತ್ತಮ ಪುರುಷ ಕಬಡ್ಡಿ ರೈಡರ್ ಶ್ರೀನಿವಾಸ್ ಹೊಸಮನೆ:
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ನಿವಾಸಿ ತುಂಗಭದ್ರಾ ಸಿರುಗುಪ್ಪ ತಂಡದ ಆಟಗಾರ ಹಾಗೂ ಆಳ್ವಾಸ್ ಪದವಿ ಕಾಲೇಜಿನ ವಿದ್ಯಾಭ್ಯಾಸ ಮಾಡುತ್ತಿರುವ ರೈಡರ್ ಅವರು ಈ ಸೀಜನ್ ನ ಅತ್ಯುತ್ತಮ ಕಬಡ್ಡಿ ರೈಡರ್ ಆಗಿ ಆಯ್ಕೆಯಾಗಿದ್ದು ವಿಶೇಷವಾಗಿತ್ತು. ಶ್ರೀನಿವಾಸ್ ಹೊಸಮನೆ ಸೃಜನಾತ್ಮಕ ಚಾಣಾಕ್ಷತನದಿಂದ ರೈಡ್ ಮಾಡಿದ ಗಣಿನಾಡಿನ ಪ್ರತಿಭೆಯಾಗಿದ್ದಾರೆ.
ಈ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ತೀರ್ಪುಗಾರರಾದ ಗದಗಿನ ಬಿ.ಹೆಚ್ ಹಡಪದ, ನರಸಿಂಹ ಹಾಗೂ ಪಂದ್ಯಾವಳಿ ನಿರ್ಣಾಯಕರಾದ ಡಾ.ಭಾಷಾ, ಶ್ರೀನಿವಾಸ, ಚಂದ್ರ, ಚಂದ್ರಶೇಖರ ಇನ್ನಿತರರು ಇದ್ದರು‌. ಬಂಡಿಹಟ್ಟಿಯ ಷಣ್ಮುಖ, ಬಸಪ್ಪ, ಪಂಪಾಪತಿ ಮತ್ತು ಇನ್ನಿತರರು ಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿದರು.
ಈ ಸಮಯದಲ್ಲಿ ಜಿಲ್ಲಾ ಆಮೇಚೂರು ಕಬಡ್ಡಿ ಅಸೋಸಿಯೇಷನ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ದಾನಿಗಳಿಂದ ಪಂದ್ಯಾವಳಿ ಉತ್ತಮವಾಗಿ ನಡೆದವು.
WhatsApp Group Join Now
Telegram Group Join Now
Share This Article