ಡಾ. ಕರ್ಕಿಯವರ ಕಾವ್ಯದಲ್ಲಿ ಮಾನವೀಯತೆಯ ಮೌಲ್ಯಗಳು  ಅಡಗಿವೆ: ಡಾ. ತೋಂಟದ ಸಿದ್ದರಾಮ ಶ್ರೀಗಳು

Ravi Talawar
ಡಾ. ಕರ್ಕಿಯವರ ಕಾವ್ಯದಲ್ಲಿ ಮಾನವೀಯತೆಯ ಮೌಲ್ಯಗಳು  ಅಡಗಿವೆ: ಡಾ. ತೋಂಟದ ಸಿದ್ದರಾಮ ಶ್ರೀಗಳು
WhatsApp Group Join Now
Telegram Group Join Now

ಡಾ. ಡಿ .ಎಸ್. ಕರ್ಕಿಯವರ 117 ನೇ ಜನ್ಮದಿನೋತ್ಸವ ಆಚರಣೆ

ಬೆಳಗಾವಿ:  ಕಾವ್ಯಗಳ ಮೂಲಕ  ನಾಡಿಗೆ ಜ್ಞಾನವನ್ನು  ಉಣಬಡಿಸಿದವರು ಡಾ. ಡಿ .ಎಸ್. ಕರ್ಕಿಯವರು,  ಅವರು ರಚಿಸಿದ ಒಂದೊಂದು ಕಾವ್ಯದಲ್ಲಿ ಮಾನವೀಯತೆಯ ಮೌಲ್ಯಗಳು ಅಡಗಿವೆ ಎಂದು  ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ  ಭಾನುವಾರ ಡಾ. ಡಿ .ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಡಾ. ಡಿ .ಎಸ್. ಕರ್ಕಿಯವರ 117 ನೇ ಜನ್ಮದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಸಾನುಭುತಿ ಕಾವ್ಯವನ್ನು ರಚಿಸಿದವರು ಸಾಹಿತ್ಯದ ಕಣಜ ಡಾ. ಕರ್ಕಿಯವರು,  ಹೀಗಾಗಿ ಅವರು ರಚಿಸಿದ  “ಹಚ್ಚೆವು ಕನ್ನಡದ ದೀಪ” ಗೀತೆ ವಿಶ್ವವಿಖ್ಯಾತಿ ಪಡೆದಿದೆ.   ವಿದೇಶಿದಲ್ಲಿಯೂ ಸಹ ಕನ್ನಡದ ದೀಪ  ಪ್ರಜ್ವಲಿಸುತ್ತಿದೆ‌ . ಅಂತಹ ಶ್ರೇಷ್ಠ ಸಾಹಿತಿ ಬೆಳಗಾವಿ ನಾಡಿನವರೂ ಎಂಬುವುದು  ಹೆಮ್ಮೆಯ ವಿಷಯ ಎಂದರು.

ಕಾವ್ಯ ಬರೆದವರುಂಟು , ಕಾವ್ಯವಾದವರುಂಟು ಕಾವ್ಯವಾಗಿ ಕಾವ್ಯ ರಚಿಸಿದ ಕೆಲವೇ..
ಕೆಲವು.. ಕವಿಗಳಲ್ಲಿ ಡಾ.ಕರ್ಕಿಯವರು ಒಬ್ಬರು. ಕವನಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಉನ್ನತಮೌಲ್ಯಗಳನ್ನು ಉದಾತ್ತ ಆದರ್ಶಗಳನ್ನು ಹೃದ್ಯವಾಗಿ ಹಾಡಿದ ಭಾವಗೀತೆಯ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ. ಚಿರಕಾಲ ಉಳಿಯುವಂತ  ಶ್ರೇಷ್ಠ ಗೀತೆ ನೀಡಿದ್ದಾರೆ, ಈ ಮೂಲಕ ಬೆಳಗಾವಿಗೆ ಕೀರ್ತಿ  ತಂದು ಕೊಟ್ಟಿದ್ದಾರೆ ಎಂದು  ಶ್ರೀಗಳು  ಬಣ್ಣಿಸಿದರು.

ಸಾಹಿತ್ಯ, ಸಂಗೀತಗಳನ್ನು ಓದುವ ಅಭಿರುಚಿ  ಬೆಳಿಸಿಕೊಂಡಾಗ ಮಾತ್ರ  ಸಮಾಜದಲ್ಲಿ ಸುಸಂಸ್ಕೃತ ಮನುಷ್ಯರಾಗಲು ಸಾಧ್ಯ.  ಮನುಷ್ಯರನ್ನು ಪರಿರ್ವತನೆ ಮಾಡುವ ಶಕ್ತಿ ಸಾಹಿತ್ಯಕ್ಕಿದೇ  , ಹೀಗಾಗಿ ಶಾಂತಿ, ಸಂತೋಷ, ನೆಮ್ಮದಿಯ ಬದಕು ನಮ್ಮದಾಗಬೇಕಾದರೆ ಕರ್ಕಿಯವರಂತ  ಕವಿಗಳ ಕೃತಿಗಳನ್ನು ಓದಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು  ಶ್ರೀಗಳು ಸಲಹೆ ನೀಡಿದರು.

ಕಸಾಪ ಅಧ್ಯಕ್ಷೇ ಮಂಗಲಾ ಮೆಡಗುಡ್ಡ ಮಾತನಾಡಿ,  ನಾಡಿನ ದಿಮಂತ ಕವಿ ಡಾ. ಡಿ .ಎಸ್. ಕರ್ಕಿಯವರ ಜನ್ಮದಿನೋತ್ಸವ  ಪ್ರತಿವರ್ಷವೂ ಅದ್ದೂರಿಯಾಗಿ ಆಚರಿಸೋಣ. ಅದಕ್ಕಾಗಿರಾಮದುರ್ಗ ತಾಲೂಕಿನ ಹಿರೇಕೊಪ್ಪ ದಲ್ಲಿ ಕರ್ಕಿಯವರ ಭವನ ಶ್ರೀಘ್ರವೇ  ನಿರ್ಮಾಣಕ್ಕೆ ನಾವೆಲ್ಲರೂ ಕೈ ಜೋಡಿಸೋಣ. ಕರ್ಕಿಯವರ ಭವನ ನಿರ್ಮಾಣವಾದ ಕರ್ಕಿ ಅವರಿಗೆ ಗೌರವ ಸಲ್ಲಿಸದಂತಾಗುತ್ತದೆ.   ಅವರ ಮಗಳು ಸಾಕಷ್ಟು ಸಾಹಿತಿಗಳನ್ನು ಬರೆದಿದ್ದಾರೆ. ಅವುಗಳು ಬೆಳಕಿಗೆ ಬರದಿರುವುದು ವಿಷಾದನೀಯ. ಜಿಲ್ಲೆಯಲ್ಲಿ  ಸಾಹಿತ್ಯಕ್ಕೆ
ಇಷ್ಟೊಂದು ನಿರಾಶಕ್ತಿ ಇದೆ‌. ವಿವಿದ ಜಿಲ್ಲೆಗಳಲ್ಲಿ ಸಾಹಿತಿ ಬರಹದ ಸ್ಥಿತಿ ಏನೂ… ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತರು:- ಪ.ಗು. ಸಿದ್ದಾಪುರ , ವಿಜಯಪುರ ( ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತಾ), ಸುಧಾ ಪಾಟೀಲ,  ಬೆಳಗಾವಿ  ( ಹೆಜ್ಜೆ ಗುರುತು),  ಮಧು ಕಾರಗಿ  , ಬ್ಯಾಡಗಿ ( ತೆರೆಯದ ಬಾಗಿಲು) ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಡಿ .ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ  ಹಿರಿಯ ಸಾಹಿತಿಗಳಾದ  ಆಶಾ‌ ಯಮಕನಮರಡಿ, ಹಮೀದಾ ಬೆಗಂ , ಜಯಶೀಲ ಬ್ಯಾಕೋಡ್ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿ ಪುಟ್ಟಿ ( ತಿರ್ಲಾಪೂರ) ಸ್ವಾಗತಿಸಿ, ಪರಿಚಯಿಸಿ , ಪ್ರಾಸ್ತಾವಿಕ ವಾಗಿ ಮಾತನಾಡಿದರು.  ನಿವೃತ್ತ ಪ್ರಾಚಾರ್ಯ ರಮೇಶ ಕರ್ಕಿ ಅಧ್ಯಕ್ಷತೇ ವಹಿಸಿದರು.  ಪ್ರೊ. ಗಿರೀಶ ಕರ್ಕಿ, ಶೈಲಜಾ ಭಿಂಗೆ, ವಿಜಯಕುಮಾರ ಕರ್ಕಿ, ಪ್ರವೀಣ ಕರ್ಕಿ, ವಿಜಯಾ ಕರ್ಕಿ, ಸತೀಶ ಕರ್ಕಿ, ಸತೀಶ ಕರ್ಕಿ, ಶಶಿಧರ ಬೈರನಟ್ಟಿ, ಶಶಿಧರ ಕರ್ಕಿ, ವಿರೂಪಾಕ್ಷಪ್ಪಾ ಕರ್ಕಿ,  ಶಿಕ್ಷಕಿ ಮೀನಾಕ್ಷಿ ಸೂಡಿ ನಿರೂಪಿಸಿದರು. ಸುನೀತಾ ಸೋಲಾಪುರೆ ವಂದಿಸಿದರು

WhatsApp Group Join Now
Telegram Group Join Now
Share This Article