ಇಂದು ಪಂಜಾಬ್​ ಬಂದ್​ಗೆ ಕರೆಕೊಟ್ಟ ರೈತಪಡೆ; ಇತರ ಸೌಕರ್ಯಗಳು ಸ್ಥಗಿತ!

Ravi Talawar
ಇಂದು ಪಂಜಾಬ್​ ಬಂದ್​ಗೆ ಕರೆಕೊಟ್ಟ ರೈತಪಡೆ; ಇತರ ಸೌಕರ್ಯಗಳು ಸ್ಥಗಿತ!
WhatsApp Group Join Now
Telegram Group Join Now

ಚಂಡೀಗಢ ಪಂಜಾಬ್​​: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್​ ಮತ್ತು ಹರಿಯಾಣ ರೈತರು ಶಂಭು ಮತ್ತು ಕನೌರಿ ಗಡಿ ಬಳಿ ನಿರಂತರ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ನಡುವೆ ರೈತರು ನಡೆಸಿದ್ದ ದೆಹಲಿ ನಡಿಗೆ ಹಲವು ಬಾರಿ ವಿಫಲವಾಗಿದ್ದು, ಗಡಿಯಲ್ಲಿಯೇ ಅವರನ್ನು ತಡೆಯಲಾಗುತ್ತಿದೆ. ಮತ್ತೊಂದೆಡೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ನಾಯಕ ಜಗ್ಜೀತ್​​ ಸಿಂಗ್​ ಕಳೆದ 34 ದಿನಗಳಿಂದ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆ ಮಧ್ಯ ಪ್ರವೇಶಿಸಿರುವ ಸುಪ್ರೀಂ ಕೋರ್ಟ್​​ ಪಂಜಾಬ್​ ಮತ್ತು ಕೇಂದ್ರ ಸರ್ಕಾರಗಳು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದೆ.

ಈ ನಡುವೆ ರೈತರು ಇಂದು ಪಂಜಾಬ್​ ಬಂದ್​ಗೆ ಕರೆ ನೀಡಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್​ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಇದಾದ ಬಳಿಕ ಹರಿಯಾಣದಲ್ಲಿ ಜನವರಿ 4 ರಂದು ಮತ್ತು ಜನವರಿ 9 ರಂದು ಮೊಗಾದಲ್ಲಿ ಮಹಾಪಂಚಾಯತ್​ ಸಂಘಟಿಸಲಾಗುವುದು ಎಂದು ರೈತರು ಘೋಷಿಸಿದ್ದಾರೆ.

ಡಿಸೆಂಬರ್​ 30ರಂದು ಕರೆ ನೀಡಿರುವ ಪಂಜಾಬ್​ ಬಂದ್​ ರಸ್ತೆ ಟ್ರಾಫಿಕ್​ ಜೊತೆಗೆ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಇದೇ ವೇಳೆ ಪಂಜಾಬ್​​ ಉದ್ಯಮಿಗಳು ಮಾರುಕಟ್ಟೆ ತೆರೆಯುವುದಾಗಿ ಘೋಷಿಸಿದ್ದಾರೆ. ಈ ಕುರಿತು ಮಾತನಾಡಿರುವ ಪಂಜಾಬ್​ ಉದ್ಯಮ ಮಂಡಳಿಯ ರಾಜ್ಯ ನಾಯಕ ಅನಿಲ್​ ಬನ್ಸಾಲ್​ ನಾನಾ, ರೈತ ಸಂಘಟನೆ ಬಂದ್​ ಕುರಿತಾಗಿ ನಮ್ಮ ಜೊತೆ ಯಾವುದೇ ಸಂಪರ್ಕ ನಡೆಸಿಲ್ಲ. ಜೊತೆಗೆ ಬಂದ್​ನಿಂದ ಉದ್ಯಮಿ – ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ಈಗಾಗಲೇ ಉದ್ಯಮವೂ ಕೆಟ್ಟ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಪಂಜಾಬ್​ ಬಂದ್​​ಗೆ ಬೆಂಬಲ ನೀಡುವುದಿಲ್ಲ ಎಂದರು.

WhatsApp Group Join Now
Telegram Group Join Now
Share This Article