ಹೈಕೋರ್ಟ್​ನ ಸಂಭಾವ್ಯ ನ್ಯಾಯಮೂರ್ತಿಗಳ ಜತೆ ಸುಪ್ರೀಂಕೋರ್ಟ್​ ಕೊಲಿಜಿಯಂ  ಮಾತುಕತೆ

Ravi Talawar
ಹೈಕೋರ್ಟ್​ನ ಸಂಭಾವ್ಯ ನ್ಯಾಯಮೂರ್ತಿಗಳ ಜತೆ ಸುಪ್ರೀಂಕೋರ್ಟ್​ ಕೊಲಿಜಿಯಂ  ಮಾತುಕತೆ
WhatsApp Group Join Now
Telegram Group Join Now

ಹೈಕೋರ್ಟ್​ನ ಸಂಭಾವ್ಯ ನ್ಯಾಯಮೂರ್ತಿಗಳ ಜತೆ ಸುಪ್ರೀಂಕೋರ್ಟ್​ ಕೊಲಿಜಿಯಂ  ಮಾತುಕತೆ ಆರಂಭಿಸಿದೆ. ಸಾಂಪ್ರದಾಯಿಕ ಹಾದಿಗಿಂತ ಸ್ವಲ್ಪ ಭಿನ್ನವಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆ ಆಕಾಂಕ್ಷಿಗಳ ಜತೆ ಈಗಾಗಲೇ ಒಮ್ಮೆ ಸಂವಾದ ನಡೆಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದು ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ಬೆಳವಣಿಗೆ ಎಂದೇ ಹೇಳಬಹುದು.

ಮೂವರು ಸದಸ್ಯರ ಕೊಲಿಜಿಯಂನಲ್ಲಿ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಭೂಷಣ್ ಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರು ಇದ್ದಾರೆ. ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲರ ಹೆಸರುಗಳನ್ನು ರಾಜಸ್ಥಾನ, ಅಲಹಾಬಾದ್ ಮತ್ತು ಬಾಂಬೆ ಹೈಕೋರ್ಟ್ ಗಳಿಗೆ ನೇಮಕ ಮಾಡಲು ಉದ್ದೇಶಿಸಲಾಗಿದೆ.

ಅಭ್ಯರ್ಥಿಗಳ ಬಡ್ತಿಗೆ ಮುನ್ನ ಅವರ ವ್ಯಕ್ತಿತ್ವದ ಬಗ್ಗೆ ಆಳವಾಗಿ ಅಧ್ಯಯನ ಮಾಡುವ ಉದ್ದೇಶದಿಂದ ಮತ್ತು ಬಡ್ತಿಗೆ ಎಷ್ಟು ಸೂಕ್ತ ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಮಾತುಕತೆ ಆರಂಭಿಸಿದ್ದಾರೆ. ಇನ್ನೊಂದು ಮಹತ್ವದ ಹೆಜ್ಜೆಯಲ್ಲಿ, ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಕಾಂತ್ ಅವರನ್ನೊಳಗೊಂಡ ಕೊಲಿಜಿಯಂ ಮೊದಲ ಬಾರಿಗೆ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳೊಂದಿಗೆ ಸಂವಾದ ಪ್ರಾರಂಭಿಸಿದೆ.
WhatsApp Group Join Now
Telegram Group Join Now
Share This Article