ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಅನಾವರಣ

Ravi Talawar
 ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಅನಾವರಣ
WhatsApp Group Join Now
Telegram Group Join Now
ಹಸಿರು ಕ್ರಾಂತಿ  ವರದಿ
ಜಮಖಂಡಿ: ಡಾ.ಅಂಬೇಡ್ಕರ್ ಮಾರ್ಗದರ್ಶನದಲ್ಲಿ ನಡೆಯಬೇಕು, ದೇಶದಲ್ಲಿ ಸಮಾನತೆಯ ಪರಿಕಲ್ಪನೆಯ ಮಾರ್ಗವನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರಿಂದಲೇ ಪ್ರತಿಯೊಬ್ಬರು ಗೌರವಯುತವಾಗಿ ಬದುಕಲು ಸಾಧ್ಯವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಹತ್ತಿರದ ಕಡಕೋಳ ಪುನರವಸತಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳಾ ಸಮಾನತೆ, ಶಿಕ್ಷಣಕ್ಕೆ ಮಹತ್ವ ನೀಡಿದ್ದ ಅವರ ಮಾರ್ಗದರ್ಶನ ಎಲ್ಲರಿಗೂ ಅವಶ್ಯವಾಗಿದೆ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ದೇಶದ ಅಭುವೃದ್ಧಿಗೆ ಶ್ರಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ ಮಾತನಾಡಿ, ಡಾ.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡೆಯನ್ನು ಟೀಕಿಸಿದರು. ಹಿಂದುಳಿದ ಜನಾಂಗಕ್ಕೆ ಯಾವ ದೇವರು ಸಹಾಯ ಮಾಡಿರಲಿಲ್ಲ ಡಾ. ಅಂಬೇಡ್ಕರ್‌ರಿಂದ ಮಾತ್ರ ನಮ್ಮ ಸಮಾಜ ಇಂದು ತಲೆ ಎತ್ತಿ ಬದುಕಲು ಸಾಧ್ಯವಾಗಿದೆ. ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಲು ಯುವಕರಿಗೆ ಸಲಹೆ ನೀಡಿದರು.
ಚಲನಚಿತ್ರ ನಟ, ನಿರ್ದೇಶಕ ಡಾ.ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿಯವರು ಮಾತನಾಡಿ, ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು, ಎಲ್ಲಾ ರಂಗಗಳಲ್ಲಿಯೂ ಹಿಂದುಳಿದ ಸಮಾಜ ಮುಂದಕ್ಕೆ ಬರಬೇಕು, ಯಾರೇ ಹೀಯಾಳಿಸಿದರೂ ಅವರಿಗೆ ಶಿಕ್ಷಣ, ವಿದ್ಯೆಯಿಂದಉತ್ತರಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ತೌಫಿಕ್ ಪಾರ್ಥನಳ್ಳಿ ಮಾತನಾಡಿ, ದೇಶ ಕಂಡ ಮಹಾನ್ ನಾಯಕ ಡಾ.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡುವುದು ಸುಸಂಸ್ಕೃತಿ ಅಲ್ಲ ಅವರಬಗ್ಗೆ ಮಾತನಾಡಿದರೆ ಉಗ್ರವಾದ ಹೋರಾಟ ಎದುರಿಸಬೇಕಾ ಗುತ್ತದೆ ಎಂದು ಎಚ್ಚರಿಸಿದರು.
ಹಿರಿಯ ನ್ಯಾಯವಾದಿ ಎನ್.ಎಸ್.ದೇವರವರ ಮಾತ ನಾಡಿ, ಕಡಕೋಳ ಗ್ರಾಮ ತಾಲೂಕಿನಲ್ಲಿ ಹೆಚ್ಚುವಿದ್ಯಾವಂತರನ್ನು ಹೊಂದಿದೆ. ಡಾ.ಅಂಬೇಡ್ಕರ್ ಅವರು ಡ್ರಾಪ್ಪಕಮೀಟಿಯ ಅಧ್ಯಕ್ಷರಾಗಿ ದೇಶ ವನ್ನು ಮುನ್ನಡೆಸಲು ಅತ್ಯಂತ ಉತ್ಕೃಷ್ಟವಾದ ಸಂವಿಧಾನವನ್ನು ನೀಡಿದ್ದಾರೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದರು. ಕಡಕೋಳ ಪುನರ್‌ವಸತಿ ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯಾಗಬೇಕು ಎಂದರು.
ಭೀಮಪುತ್ರ ಸಂತೋಷ ಚಿಕ್ಕೋಡಿಯವರು ಮಾತನಾಡಿ, ಡಾ.ಅಂಬೇಡ್ಕರ ಅವರ ಜೀವನ ಚರಿತ್ರೆಯನ್ನು ಸೊಗಸಾಗಿ ನಿರೂಪಿಸಿದರು. ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು. ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಸಹಜಾನಂದ ಅವ ಧೂತ ಸ್ವಾಮಿಗಳು ಆಶೀರ್ವಚನ ನೀಡಿದರು. ಕೃಷ್ಣಾನಂದ ಅವಧೂತ ಸ್ವಾಮಿಗಳು, ಧಂಪಾಲ ಭಂತೇಜ ಸ್ವಾಮಿಗಳು, ಮುಖಂಡರಾದ ರಾಜು ಮೇಲಿನಕೇರಿ, ಸಿದ್ದು ಮೀಸಿ, ಯಮನೂರು ಮುಲ್ಲಂಗಿ, ಪತ್ರಕರ್ತ ಅಪ್ಪುಪೋತರಾಜ, ಮಲ್ಲು ಮಠ, ರವಿ ಬಬಲೇಶ್ವರ, ಯಮುನಪ್ಪ ಗುಣಧಾಳ, ಶಶಿಧರ ಮೀಸಿ, ಕುಶಾಲ ವಾಗ್‌ಮೋರೆ, ಶ್ರೀಶೈಲ ದೇಸಾಯಿ, ಮಹಾವೀರ ಸುಲ್ಪಿ, ಎಂ.ಬಿ.ನ್ಯಾಮಗೌಡ, ಪೀರಾಖಾದ್ರಿ, ಸೂರಜ ಕುಡ್ರಾಣಿ ಮುಂತಾದವರಿದ್ದರು.
WhatsApp Group Join Now
Telegram Group Join Now
Share This Article