ಎಮ್ ಕೆ ಹುಬ್ಬಳ್ಳಿ . ಸಹಕಾರಿ ರಂಗ ಮತ್ತು ಗ್ರಾಮೀಣ ಕೃಷಿ ಸಹಕಾರಿ ಸಂಘಗಳಿಂದ ರೈತರ ಬೆಳವಣಿಗೆ ಸಾಧ್ಯ. ಈ ಕಾರ್ಯದಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಇತ್ತೀಚಿಗೆ ಹೊಳಿನಾಗಲಾಪೂರ ಗ್ರಾಮದಲ್ಲಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ, ಹೊಳಿನಾಗಲಾಪೂರ ಇದರ ನೂತನ ಕಟ್ಟಡ ಉದ್ಘಾಟಿಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಮಾಜಿ ಶಾಸಕ ಜಗದೀಶ್ ಮೆಟಗುಡ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ, ಉದ್ಯಮಿ ವಿಜಯ ಮೆಟಗುಡ, ಮುಖಂಡ ಬಾಳಾಸಾಹೇಬ ದೇಸಾಯಿ,ಮಾಜಿ ಜಿ ಪಂ. ಉಪಾಧ್ಯಕ್ಷ ಚನ್ನಬಸಪ್ಪ ಮೊಖಾಸಿ, ಈಶ್ವರ ಉಳ್ಳೆಗಡ್ಡಿ, ಸಂಘದ ಅಧ್ಯಕ್ಷ ಪಕ್ಕೀರಪ್ಪ ಕೋಟಗಿ, ಉಪಾಧ್ಯಕ್ಷ ಸಂಗಪ್ಪ ಶೀಲವಂತರ, ಆಡಳಿತ ಮಂಡಳಿ ಸದಸ್ಯರಾದ ಸಿದ್ದಪ್ಪ ಬಂಗಿ, ವಿಠ್ಠಲ ಪವಾರ, ಬಸವರಾಜ ಚನ್ನನವರ, ಗಂಗಪ್ಪ ರೋಗನ್ನವರ, ರಮೇಶ ಬಿಡಿ, ಜೈಪಾಲ ಮೂಳಕುರ, ಯಲ್ಲಪ್ಪ ಕೌಜಲಗಿ, ಯಲ್ಲಪ್ಪ ಮರೆನ್ನವರ, ರತ್ನವ್ವ ಹಿರೇಮಠ, ಬಾಳವ್ವಾ ಚಂದರಗಿ, ಶಿವಾನಂದ ಗಣಾಚಾರಿ, ಕಾರ್ಯನಿರ್ವಾಹಕ ರಮೇಶ ಕಿಡತಾಳ ಸೇರಿದಂತೆ ಸಂಘದ ಸದಸ್ಯರು, ಮುಖಂಡರು, ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ನಿರೂಪಣೆಯನ್ನು ನಾಗವೇಣಿ ಕುಡಚಿಮಠ ನೆರವೇರಿಸಿದರು.