ಚನ್ನಮ್ಮನ ಕಿತ್ತೂರು: ಬೆಳಗಾವಿ ಜಿಲ್ಲೆಯ ಶಾಸಕರಿಗೆ ಲೋಕೋಪಯೋಗಿ ಇಲಾಖೆಯಿಂದ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಜಿಲ್ಲೆಯ ಸರ್ವ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಆದ್ಯತೆ ನೀಡಲಾಗುತ್ತಿದೆ ಮತ್ತು ಹಿಂದಿನ ಸರ್ಕಾರ ಮಾಡಿದ ಲೋಪದೋಷಗಳಿಂದ ನಮಗೆ ಹೆಚ್ಚಿನ ಮಟ್ಟದ ರಸ್ತೆ ಕಾರ್ಯ ಮಾಡಬೇಕಾಗಿದ್ದು ಹಂತ ಹಂತವಾಗಿ ರಾಜ್ಯ ಹಾಗೂ ಗ್ರಾಮೀಣ ಭಾಗದ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗುವದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬುಧವಾರದಂದು ಲೋಕೋಪಯೋಗಿ ಇಲಾಖೆ, ರಾಜ್ಯ ಹೆದ್ದಾರಿ ಪ್ರಾಧಿಕಾರ ವತಿಯಿಂದ ನೇಸರಗಿ ಕ್ರಾಸ್‌ದಿಂದ ನಾಗನೂರ ಕ್ರಾಸ್ ವರೆಗೆ ಜತ್ತ ಜಾಂಬೋಟಿ 5ನೇ ಹಂತದ 30 ಕೋಟಿ ರೂಪಾಯಿಗಳ ರಾಜ್ಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ರಸ್ತೆಗಳು ಅಭಿವೃದ್ಧಿಗೊಂಡಿಲ್ಲ. ಹೀಗಾಗಿ ಎಲ್ಲಾ ಹೊರೆ ನಮ್ಮ ಮೇಲೆ ಬಿದ್ದಿದೆ. ಕಳೆದ ವರ್ಷದಲ್ಲಿ ಅನುದಾನದ ಕೊರತೆ ಇತ್ತು. ಆದರೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಎಲ್ಲಾ ದರ್ಜೆಯ ರಸ್ತೆಗಳ ಅಭಿವೃದ್ಧಿ ಆದ್ಯತೆ ನೀಡುತ್ತೇನೆಂದು ತಿಳಿಸಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿಯೇ ಕಿತ್ತೂರು ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಹೆಚ್ಚಿನ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮೀಣ ಭಾಗದ ರಸ್ತೆಗಳ ನಿರ್ಮಾಣಕ್ಕೆ ಅನುದಾನ ನೀಡಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ್, ನೇಸರಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಉಮೇಶ ಪಾಟೀಲ್, ಗುತ್ತಿಗೆದಾರ ಈಶ್ವರ ಮಟಗಾರ, ಬಾಳಪ್ಪ ಮಾಳಗಿ, ರವಿ ಸಿದ್ದಮನವರ,ಶಿವನಗೌಡ ಪಾಟೀಲ,ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡರ, ಸುರೇಶ ಆಗಸಿಮನಿ, ಪ್ರಕಾಶ ತೋಟಗಿ, ಯಮನಪ್ಪ ಪೂಜೇರಿ, ರಾಯನಗೌಡ ಪಾಟೀಲ್, ಮಲ್ಲಿಕಾರ್ಜುನ ಕಲ್ಲೋಳಿ, ಶಂಕರ ತಿಗಡಿ, ಎಸ್ ವಿ ಸೋಮಣ್ಣವರ, ಸಿದ್ದಪ್ಪ ಇಂಚಲ,ನಜೀರ್ ತಹಶೀಲ್ದಾರ, ಮನೋಜ ಕೆಳಗೇರಿ, ಶಿವಾನಂದ ಕುಂಕುರ, ಸುಜಾತ ಪಾಟೀಲ್, ಶಿವನಗೌಡ ಪಾಟೀಲ, ಚನಗೌಡ ಪಾಟೀಲ,ಕಾಶಿಮ್ ಜಮಾದರ,ರಮೇಶ ಮೇಲಿನಮನಿ, ಅಬ್ಬಾಸ ಪಿರಾಜಾದೆ, ಸಚಿನ ಕಲ್ಲೂರ, ಈರಪ್ಪ ಉಳವಿ, ಸಿದ್ದು ಭಾಗವಾನ, ಸತ್ತಾರ ಮೂಕಾಶಿ, ಆಯುಭ ಗಣಾಚಾರಿ ಸೇರಿದಂತೆ ನೇಸರಗಿ ಜಿ ಪಂ ಕ್ಷೇತ್ರದ ಮುಖಂಡರು, ಅಧಿಕಾರಿಗಳು,ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೇಸರಗಿ ಭಾಗದ ಅನೇಕ ಗ್ರಾಮಗಳ ಜನತೆ ಅಹವಾಲುಗಳ ಮುಖಾಂತರ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.ಸಿ ಪಿ ಐ ರಾಘವೇಂದ್ರ ಹವಾಲ್ದಾರ, ಪಿ ಎಸ್ ಐ ವಾಯ್ ಎಲ್ ಶೀಗಿಹಳ್ಳಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ವದಗಿಸಿದ್ದರು..