ನೇಸರಗಿ: ಇಲ್ಲಿನ ಕ್ರಾಸದಿಂದ ಮದನಭಾವಿ, ಮುರಕಿಭಾವಿ, ನಾಗನೂರ ಹಳ್ಳದವರೆಗೆ ಸುಮಾರು 30 ಕೋಟಿ ರೂಪಾಯಿಗಳ ವೆಚ್ಚದ ಲೋಕೋಪಯೋಗಿ ಇಲಾಖೆ, ರಾಜ್ಯ ಅಭಿವೃದ್ಧಿ ಯೋಜನೆ ವತಿಯಿಂದ ಎಸ್ ಎಚ್ ಡಿ ಪಿ ಯೋಜನೆಯಡಿ, ಹಂತ 5 ರ ಘಟ್ಟದ 01 ಪ್ಯಾಕೇಜ್ ಸಂಖ್ಯೆ 685 ರ ಅಡಿಯಲ್ಲಿ 6 ಕಿಲೋ ಮೀಟರ ಉದ್ದದ ಜತ್ತ ಜಾಂಬೊಟಿ ರಸ್ತೆ ನಿರ್ಮಾಣ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಬುಧವಾರ ಡಿಸೆಂಬರ್ 25ರ ಬೆಳಿಗ್ಗೆ 10-30 ಕ್ಕೆ ನೇಸರಗಿ ಕ್ರಾಸ ಗೆ ರಾಜ್ಯದ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಆಗಮಿಸಲಿದ್ದು ರಸ್ತೆ ಕಾಮಗಾರಿ ಉದ್ಘಾಟನೆಯು ನೇಸರಗಿ ಕ್ರಾಸನಲ್ಲಿ ನೆರವೇರಲಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದ್ದಾರೆ.