ಮತ್ತಿಕೊಪ್ಪ: ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟಿçÃಯ ರೈತ ದಿನವನ್ನು ಆಚರಿಸಲಾಯಿತು. ರಾಷ್ಟಿçÃಯ ರೈತ ದಿನಾಚರಣೆಯ ಉದ್ಘಾಟನೆಯನ್ನು ಚಚಡಿ ಗ್ರಾಮದ ಮಿಲೆನಿಯರ್ ರೈತ ಪ್ರಶಸ್ತಿ ಪುರಸ್ಕೃತರಾದ ನಾಗರಾಜ ದೇಸಾಯಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಕೃಷಿ ವಿಜ್ಞಾನ ಕೇಂದ್ರವು ಈ ಭಾಗದಲ್ಲಿ ಸ್ಥಾಪಿತಗೊಂಡ ನಂತರ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರೈತರಿಗೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಮಾಡುತ್ತಿದೆ. ಆ ಮೂಲಕ ಕೃಷಿ ಉತ್ಪಾದಕತೆಯನ್ನು ಅಧಿಕಗೊಳಿಸಲು ಸಹಕಾರಿಯಾಗಿದೆ ಮತ್ತು ಕೃಷಿ ವಿಜ್ಞಾನಿಗಳ ತಾಂತ್ರಿಕ ಮಾಹಿತಿಯಿಂದ ಕೃಷಿಯಲ್ಲಿ ಅಧಿಕ ಲಾಭಗಳಿಸಲು ಅನುಕೂಲವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ ಮಾತನಾಡಿ, ಪ್ರತಿ ವರ್ಷ ಕೃಷಿ ವಿಜ್ಞಾನ ಕೇಂದ್ರವು ರೈತ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದು ರೈತ ದಿನಾಚರಣೆಯ ಹಿನ್ನಲೆ ಉದ್ಧೇಶಗಳನ್ನು ತಿಳಿಪಡಿಸಿ ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 23 ರಂದು ಕಿಸಾನ್ ದಿವಸ್ ಎಂದು ಜನಪ್ರಿಯವಾಗಿರುವ ರಾಷ್ಟಿçÃಯ ರೈತ ದಿನವನ್ನು ಆಚರಿಸಲಾಗುತ್ತಿದ್ದು ದೇಶದ ಐದನೇಯ ಪ್ರಧಾನಿಯಾಗಿರುವ ಚರಣ್‌ಸಿಂಗ್ ಅವರ ಜನ್ಮದಿನವನ್ನು ರೈತದಿನ ಎಂದು ಆಚರಿಸಲಾಗುತ್ತದೆ. ಇವರು ದೇಶದ ರೈತರಿಗೆ ಪೂರಕವಾಗಿರುವ ಯೋಜನೆಗಳನ್ನು ತಂದಿದ್ದರು, ಕೃಷಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಅವರು ಕೈಗೊಂಡ ನಿರ್ಧಾರಗಳು ಬಹಳಷ್ಟು ಮಹತ್ವವಾದವುಗಳೆಂದರು.
ಮೊದಲ ಬಾರಿಗೆ ಅಗ್ರಿಕಲ್ಚರ್ ಫಾರ್ಮಸ್ ಮಾರ್ಕೆಟ್ ಬೀಲ್ ಜಾರಿಗೊಳಿಸಿದರು. ಜೊತೆಗೆ ಜೈ ಜವಾನ್ ಜೈ ಕಿಸಾನ್ ಎಂಬ ಪ್ರಸಿದ್ಧ ಫೊಷಣೆಯನ್ನು ಅನುಸರಿಸಿದ್ದರು. ಇವರು ಜಮಿನ್ದಾರಿ ಪದ್ಧತಿಯ ವಿರುದ್ಧವು ಮೊದಲ ಬಾರಿಗೆ ಧ್ವನಿ ಎತ್ತಿದರು. ಜಗತ್ತು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದಿದ್ದರೂ ಮನುಷ್ಯ ಹೊಟ್ಟೆಗೆ ತಿನ್ನುವುದು ಅನ್ನವನ್ನೆ ಹಾಗಾಗಿ ರೈತರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕೃಷಿ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೆ ಎರಡನೆ ಸ್ಥಾನದಲ್ಲಿದೆ. 2020-21 ರ ಭಾರತೀಯ ಆಧುನಿಕ ಸಮೀಕ್ಷೆ ಪ್ರಕಾರ ದೇಶದ ಉದ್ಯೋಗಿಗಳು 50 ರಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದಾರೆ. ದೇಶದ ಜಿಡಿಪಿಗೆ ಕೃಷಿ ಕ್ಷೇತ್ರ ಕೊಡುಗೆ ಶೇ. 20 ರಷ್ಟು ಇದೆ ಎಂದರು. ವಿಶ್ವದಾದ್ಯಂತ ಏಳನೆ ಅತಿದೊಡ್ಡ ಕೃಷಿ ಉತ್ಪನ್ನಗಳ ರಫ್ತುದಾರ ದೇಶ ಭಾರತವಾಗಿದೆ. ಇದಕ್ಕೆಲ್ಲ ಕಾರಣ ರೈತರ ಕೊಡುಗೆಯಾಗಿದೆ. ಆದ್ದರಿಂದ ರೈತ ದಿನವನ್ನು ಅತ್ಯಂತ ವಿಜೃಂಭಣೆಯಿAದ ರೈತರನ್ನು ಸನ್ಮಾನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಪ್ರಾಸ್ತಾವಿಕ ಮಾತನಾಡಿದ ಕೇಂದ್ರದ ವಿಜ್ಞಾನಿ ಎಸ್. ಎಂ. ವಾರದ, ಆಹಾರ ಉತ್ಪಾದನೆಯಲ್ಲಿ ಮಹತ್ತರವಾದ ಕೊಡುಗೆ ನೀಡುತ್ತಿರುವ ರೈತರ ಶ್ರಮವನ್ನು ಗೌರವಿಸಲು ದೇಶದ ಐದನೇಯ ಪ್ರಧಾನ ಮಂತ್ರಿಗಳಾದ ಚೌಧರಿ ಚರಣ್‌ಸಿಂಗ್ ಅವರ ಜನ್ಮ ದಿನದಂದು ದೇಶಾದ್ಯಂತ ರೈತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಿಲೆನಿಯರ್ ರೈತ ಪ್ರಶಸ್ತಿ ವಿಜೇತರಾದ ಶ್ರೀ ನಾಗರಾಜ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಅದೇರೀತಿ ಪ್ರಗತಿಪರ ರೈತರಾದ ವೀರಭದ್ರöಪ್ಪ ಬಸಪ್ಪ ಸಂಪಗಾAವ ಮತ್ತು ಬಾಳಪ್ಪ ನಿಜೆಪ್ಪ ಇವರನ್ನು ಸಹ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ 50 ಕ್ಕಿಂತ ಹೆಚ್ಚು ಜನ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಜಿ. ಬಿ. ವಿಶ್ವನಾಥ ಸ್ವಾಗತಿಸಿದರು, ಪ್ರವೀಣ ಯಡಹಳ್ಳಿ ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಇವರು ಕೇಂದ್ರದಲ್ಲಿ ನಿರ್ಮಿಸಿರುವ ಕೃಷಿ ಮತ್ತು ತೋಟಗಾರಿಕಾ ಪ್ರಾತ್ಯಕ್ಷಿಕೆ ಘಟಕಗಳಿಗೆ ರೈತರು ಭೇಟಿ ನೀಡಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕಾರ್ಯಕ್ರಮದಲ್ಲಿ ಇವರನ್ನು ಸತ್ಕರಿಸಿದರು.