ನೇಸರಗಿ. ಇಲ್ಲಿಗೆ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ.ವಣ್ಣೂರ ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಹಾಗೂ ಕಳೆದ ಹತ್ತು ವರ್ಷಗಳಿಂದ ಸಂಘದ ಚುಕ್ಕಾಣಿ ವಹಿಸಿರುವ ಬಾಳಾಸಾಹೇಬ ದೇಸಾಯಿ ಮುಂದಾಳತ್ವದಲ್ಲಿ ಭರ್ಜರಿ ಜಯಗಳಿಸಿದ್ದಾರೆ.
ಮುಖಂಡ ಬಾಳಾಸಾಹೇಬ ದೇಸಾಯಿ ಮಾತನಾಡಿ ನಮ್ಮ ಈ ಅಭೂತಪೂರ್ವ ಜಯಕ್ಕೆ ಕಾರಣರಾದ ಸಂಘದ ಸದಸ್ಯರು ನಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಈ ಜಯಕ್ಕೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ವಣ್ಣೂರ , ಸುನಕುಂಪಿ, ಮಾಸ್ತಮರ್ಡಿ ಗ್ರಾಮದ ರೈತರಿಗೆ ಅಭಿನಂದನೆ ಸಲ್ಲಿಸಿದರು.ಮುಂದೆ ರೈತಪರ ಕೆಲಸಗಳನ್ನು ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಸದಸ್ಯರಾದ ಈರಪ್ಪ ಶೇಬನ್ನವರ, ನಾಗಪ್ಪ ಬಶೆಟ್ಟಿ, ಬಾಳಪ್ಪ ಅಂಗಡಿ, ಸನಿಂಗಪ್ಪ ಅಡಿವೇರ, ಗಂಗಪ್ಪ ಆಡಿನ್ನವರ, ನಿಂಗಪ್ಪ ಇಂಚಲ, ಚನ್ನಪ್ಪ ಮ್ಯಾಗೇರಿ, ಸದೆಪ್ಪ ಕಿಲಾರಿ, ಲಕ್ಷ್ಮವ್ವ ಪಾಟೀಲ, ಮಹಾದೇವಿ ಹುಡೇದ , ಬಾಬಾಸಾಹೇಬ ದೇಸಾಯಿ ಮತ್ತು ಗ್ರಾಮದ ಹಿರಿಯರು, ಮುಖಂಡರು, ಸಹಕಾರಿ ಧುರೀಣರು, ಸಂಘದ ಸದಸ್ಯರು, ವನ್ನೂರ, ಸುನಕುಂಪಿ ಮಾಸ್ತಮರ್ಡಿ ಗ್ರಾಮಗಳ ರೈತರು ಉಪಸ್ಥಿತರಿದ್ದರು.