ಮುಗಳಖೋಡ ; ಪಟ್ಟಣದ ನೀರಲಕೊಡಿ ತೋಟದ ಮಹಾವೀರ ಪ್ರಾಥಮಿಕ ಶಾಲಾ ಆವರಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 50 ಲಕ್ಷ ಅನುದಾನದ ಮುಂಜೂರಾದ ಸಮುದಾಯ ಭವನದ ಭೂಮಿ ಪೂಜಾ ಕಾರ್ಯಕ್ರಮವನ್ನು ಸ್ಥಳೀಯ ಪಂಡಿತರಾದ ಶಶಿಕಾಂತ್ ಉಪಾಧ್ಯೆ ನಡೆಸಿದರು .
ಪುರಸಭೆ ಸದಸ್ಯರಾದ ಶ್ರೀ ಸಂಜಯ.ಚ. ಕುಲಗೋಡ, ಮಹಾವೀರ ಕುರಡೆ, ಶ್ರೀಮಂತ ಬಾಬಣ್ಣವರ, ಭೀಮಪ್ಪ ಬಾಬಣ್ಣವರ, ಪ್ರಕಾಶ ಆದಪ್ಪಗೋಳ ,ಅಪ್ಪಸಾಬ ಬಾಬಣ್ಣವರ, ರಾವಸಾಬ ಬಾಬಣ್ಣವರ , ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು .. ಮುಖ್ಯೋಪಾಧ್ಯಾಯ ಶ್ರೀ ಉದಯ ಇದರಗುಚ್ಚಿ ನಿರೂಪಿಸಿ ವಂದಿಸಿದರು.