ನಮ್ಮ ಕಾರ್ಯವೇ ನಮಗೆ ಆದರ್ಶವಾದಾಗ ಗೌರವ ತಾನೆ ಬರುತ್ತದೆ:  ಸುನೀಲ ಬಾಗೇವಾಡಿ

Ravi Talawar
ನಮ್ಮ ಕಾರ್ಯವೇ ನಮಗೆ ಆದರ್ಶವಾದಾಗ ಗೌರವ ತಾನೆ ಬರುತ್ತದೆ:  ಸುನೀಲ ಬಾಗೇವಾಡಿ
WhatsApp Group Join Now
Telegram Group Join Now
ಧಾರವಾಡ: ಸಾಮಾನ್ಯ ಮತ್ತು ಅಸಾಮಾನ್ಯವಾಗಿ ಬದುಕುವವರದ್ದು ‘ನಾನು’, ‘ನನ್ನದು’ ಎನ್ನುವ ಚೌಕಟ್ಟಿನಿಂದ ಹೊರತಾದ ಬದುಕು ಆಗಿರುತ್ತದೆ. ಅದು ಸ್ವಹಿತಾಸಕ್ತಿಯ ಹೊರತಾದ ಸಮಷ್ಠಿಯ ಯೋಚನೆಯಾದಾಗ ನಮ್ಮ ಕಾರ್ಯವೇ ನಮಗೆ ಆದರ್ಶವಾಗಿ ನಿಲ್ಲುತ್ತದೆ ಎಂದು ಇಂ. ಸುನೀಲ ಬಾಗೇವಾಡಿ ಹೇಳಿದರು.
ಅವರು ಅಶೋಶಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜನಿಯರ್ಸ, ಲೋಕಲ್ ಸೆಂಟರ್ ಧಾರವಾಡದಿಂದ  ಚಿಕ್ಕಮಲ್ಲಿಗವಾಡದ  ರೈಸಿಂಗ್ ರೇಸಾರ್ಟಿನಲ್ಲಿ ರಾಜ್ಯೋತ್ಸವದ ಆಚರಣೆ ಅಂಗವಾಗಿ ಮಹಾನಗರ ಪಾಲಿಕೆಯಿಂದ ನೀಡಲಾದ ಧೀಮಂತ ಪುರಸ್ಕಾರಕ್ಕೆ  ಭಾಜನರಾದ ಇಬ್ಬರು ಸಿವಿಲ್ ಇಂಜಿನಿಯರಗಳನ್ನು ಸನ್ಮಾನಿಸಿ ಮಾತನಾಡಿದರು. ಇವರಿಬ್ಬರು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿದ್ದು ಸಮಾಜದ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯವಾದ ಸೇವೆ ಸಲ್ಲಿಸಿ ಧೀಮಂತ ಪ್ರಶಸ್ತಿಗೆ ಭಾಜನರಾಗಿ ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿಗಳಾಗಿದ್ದಕ್ಕೆ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಡಾ. ರಮೇಶ್ ಚಕ್ರಸಾಲಿ ಪ್ರಾಚಾರ್ಯರು,ಧರ್ಮಸ್ಥಳ ಇಂಜಿನಿಯರಿಂಗ್ ಕಾಲೇಜ್ ಹಾಗೂ ಡಾ. ಮನೋಜ್ ಚಿತ್ತವಾಡಗಿ, ಸಿವಿಲ್ ಮುಖ್ಯಸ್ಥರು ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ, ಅವರುಗಳು ಮುಖ್ಯ ಆತಿಥಿಗಳಾಗಿ ಮಾತನಾಡಿದರು.
ಗೌರವ ಸನ್ಮಾನ ಸ್ವೀಕರಿಸಿದ ಡಾ. ಎಂ ಆರ್. ಪಾಟೀಲ ಮಾತನಾಡಿ “ಧೀಮಂತರಾಗಲು ಒಬ್ಬರಿಂದಲೇ ಸಾಧ್ಯವಿಲ್ಲ ನಿಮ್ಮೆಲ್ಲರ ಸಹಾಯ ಸಹಕಾರ  ಇದ್ದ ಕಾರಣಕ್ಕೆ ತಮಗೆ ಸಮಾಜಸೇವೆ ತಮ್ಮ ಕ್ಷೇತ್ರದ ಮೂಲಕ ಸಾಧ್ಯವಾಯಿತು”  ಎಂದರು.
ಶ್ರೀ ಅರವಿಂದ ಕುಲಕರ್ಣಿ ಮಾತನಾಡಿ “ಇಂದು ಪ್ರತಿಯೊಬ್ಬ ಇಂಜಿನಿಯರ್ ಬಹುಮುಖ ಪ್ರತಿಭೆ ವ್ಯಕ್ತಿತ್ವ ಬೆಳೆಸಿಕೊಳ್ಳುವ ಮೂಲಕ ಸಮಾಜಸೇವೆ ಮಾಡಬಹುದು. ಕಲಿಸುವದು, ಕಟ್ಟುವದು, ಕೇಳುವದು-ಮಾಡುವದರ ಮೂಲಕ ಉತ್ತಮ ವ್ಯಕ್ತಿತ್ವ  ನಿರ್ಮಾಣ ಮಾಡಿಕೊಳ್ಳಬೇಕಾಗಿದೆ ಎಂದರು.
 ಇಂ. ವಿಜಯ ತೊಟಿಗೇರ ಸ್ವಾಗತಿಸಿದರು,  ಕಾರ್ಯದರ್ಶಿಗಳಾದ ಇಂ. ಸಿದ್ದನಗೌಡ ಪಾಟೀಲರು ವಂದಿಸಿದರು. ಕಾರ್ಯಕ್ರಮವನ್ನು ಇಂ. ದಾಮೋದರ ಹೆಗಡೆ  ನಿರೂಪಿಸಿದರು. ಕೊನೆಗೆ ಮಧುರ ಸಂಗೀತವನ್ನು ಅಭಿಯಂತರರು ನೀಡಿದ್ದು ಇಡೀಯಾದ ಕಾರ್ಯಕ್ರಮ ಕಳೆಗಟ್ಟಿತ್ತು.
WhatsApp Group Join Now
Telegram Group Join Now
Share This Article