ಧಾರವಾಡ: ಶ್ರೀ ಧರ್ಮಶಾಸ್ತ ಸೇವಾ ಸಮಿತಿ ವತಿಯಿಂದ ಅಯ್ಯಪ್ಪನ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಇಂದು ಭಕ್ತರ ಹರ್ಷೋದ್ಘಾರದೊಂದಿಗೆ ಜರುಗಿತು.
ಭಕ್ತರ ಇಷ್ಠಾರ್ಥ ಸಿದ್ದಿಗಾಗಿ ಮತ್ತು ಸಕಲ ಜೀವರಾಶಿಗೆ ಲೇಸ ಬಯಸುವ ನಿಟ್ಟಿನಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀ ಅಯ್ಯಪ್ಪನ ಪೂಜೆಯು ಸಮಿತಿಯ ಸಂಸ್ಥಾಪಕ ರಮೇಶ ಪಾತ್ರೋಟ ಗುರುಸ್ವಾಮಿಗಳ ನೇತೃತ್ವದಲ್ಲಿ ನೆರವೇರಿತು.
ಬೆಳಗ್ಗೆ ನವಗ್ರಹ ಶಾಂತಿ, ಹೋಮ, ಶ್ರೀ ಲಕ್ಷ್ಮಿ ಶಾಂತಿ ಹೋಮ ಹಾಗೂ ಗಣ ಹೋಮ, ಶ್ರೀ ಅಯ್ಯಪ್ಪ ಸ್ವಾಮಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ಘೃತ ಅಭಿಷೇಕ, ಅಲಂಕಾರ ಮಹಾ ಪೂಜೆ, ಮಹಾ ಮಂಗಳಾರತಿ ಜರುಗಿದೆ. ನಂತರ ಸಂಜೆ ಅಯ್ಯಪ್ಪ ಸ್ವಾಮಿ ಅಂಬಾರಿ ಹೊತ್ತ ಆನೆಯು ಮೆರವಣಿಗೆಯಲ್ಲಿ ಸಾಗಿತು. ಮೆರವಣಿಗೆ ಕಂದಾಯ ನಗರದಿಂದ ಹೊರಟು ಶಹರದ ವಿವಿಧ ಬಡಾವಣೆ ಹಾಗೂ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ನಂತರ ಶ್ರೀ ಸಾಯಿ ಮಂದಿರಕ್ಕೆ ಆಗಮಿಸಿತು. ಈ ಸಂಧರ್ಭದಲ್ಲಿ ಚಂಡೆ ಮೇಳ್. ಜಾoಜ ಹಾಗೂ ಕಲಾ ಮೇಳ್ ಮತ್ತು ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.
ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಜಿ, ಸಿದ್ದಾರೂಢಮಠದ ಶ್ರೀ ಮಾದವಾನಂದ ಸ್ವಾಮಿಜಿ, ಶ್ರೀ ಶಿವಪುತ್ರ ಸ್ವಾಮಿಜಿ, ರಮೇಶ ಪಾತ್ರೋಟ ಗುರು ಸ್ವಾಮಿಜಿಗಳ ಸಾನಿಧ್ಯದಲ್ಲಿ ಮೆರಣಿಗೆಗೆ ಚಾಲನೆ ನೀಡಿದರು. ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ, ಎ ಸಿ ಪಿ ಪ್ರಶಾಂತ್ ಸಿದ್ದನಗೌಡರ.ಶ್ರೀ ಸಾಯಿ ಮಂದಿರ ಅಧ್ಯಕ್ಷ ಮಹೇಶ ಶೆಟ್ಟಿ . ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ ಹಾಗೂ ಮಂಜು ಬಟ್ಟಣ್ಣವರ. ರಾಹುಸಾಹೇಬ ಪಾಟೀಲ, ಶಿವಾಜಿ ಪಡಕೆ ಉದಯ ಶೆಟ್ಟಿ. ಗಿರೀಶ್ ಮಂಗೋಣಿ ಇದ್ದರು.