ಬೈಲಹೊಂಗಲ. ಚನ್ನಮ್ಮನ ಕಿತ್ತೂರು ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಬದ್ಧವಾಗಿದ್ದು ಹಂತ ಹಂತವಾಗಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ ನೇಗಿನಹಾಳ ಗ್ರಾಮದಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅನುಧಾನದಲ್ಲಿ ಸಿ ಸಿ ರಸ್ತೆ ನಿರ್ಮಾಣಕ್ಕೆ 7,20,000/- ರೂಪಾಯಿಗಳ ಅನುಧಾನದ ಕಾಮಗಾರಿಗೆ ಮತ್ತು ಮುಖ್ಯ ಮಂತ್ರಿಗಳ ವಿಶೇಷ ಅನುಧಾನದಲ್ಲಿ ಬೇವಿನಕೊಪ್ಪ ರಸ್ತೆಯ ರುಂಡದೊಳ್ಳಿ ಗ್ರಾಮದಲ್ಲಿ 10 ಲಕ್ಷ ರೂಪಾಯಿಗಳ ಅನುಧಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಮಹಾದೇವಿ ಕೋಟಗಿ, ಮಡಿವಾಳಪ್ಪ ಕುಲ್ಲೊಳ್ಳಿ, ಶಿವಾನಂದ ಕುಂಕುರ, ಈರಣ್ಣ ಉಳವಿ, ಬಸು ಹಡಗಿನಹಾಳ, ಈರಪ್ಪ ಶಿಂತ್ರಿ, ಇಂಜಿನೀಯರ ಆರ್ ಆರ್ ಬಡಿಗೇರ, ಗ್ರಾ ಪಂ ಸದಸ್ಯ ಮಹಾದೇವ ಮಡಿವಾಳ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.