ಘಟಪ್ರಭಾ: ಇಲ್ಲಿನ ಸುಪ್ರಸಿದ್ದ ಗುಬ್ಬಲಗುಡ್ಡ ಶ್ರೀ ಮಲ್ಲಿಕಾರ್ಜುನ ದೇವರ 25 ನೇ ವರ್ಷದ ಕಾರ್ತಿಕೋತ್ಸವವು ಇಂದು ಸೋಮವಾರ ದಿ. 23-12-2024 ರಂದು ಗುಬ್ಬಲಗುಡ್ಡ ಶಾಖಾ ಮೂರು ಸಾವಿರ ಮಠದ ಮನಿಪ್ರಸ್ವ ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರುವದು.
ಬೆಳ್ಳಿಗೆ 6-00 ಘಂಟೆಗೆ ರುದ್ರಾಭಿಷೇಕ, 9-30 ಕ್ಕೆ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ, ಸುಮಂಗಲೆಯರಿಂದ ಕಳಸಾರಥಿ, ಅಂಬಲಿ ಕೊಡ ಅವ್ಹಾಣ, ವಿವಿಧ ವಾದ್ಯಗಳೊಂದಿಗೆ ಮಲ್ಲಿಕಾರ್ಜುನ ದೇವರ ಮೂರ್ತಿ ಮೆರವಣಿಗೆ ಮಲ್ಲಾಪೂರ ಪಿ ಜಿ ಲಕ್ಷ್ಮೀ ದೇವಸ್ಥಾನದಿಂದ ವಿಠ್ಠಲ ಮಂದಿರ, ಮುಖ್ಯ ರಸ್ತೆ, ಮೃತ್ಯುಂಜಯ ಸರ್ಕಲ್ ಮುಖಾಂತರ ಗುಬ್ಬಲಗುಡ್ಡ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲುಪುವದೆಂದು ಮತ್ತು ಮದ್ಯಾನ್ಹ 1 ಘಂಟೆಗೆ ಭವ್ಯ ಮಹಾಪ್ರಸಾದ ಸಂಜೆ 7-30 ಕ್ಕೆ ಮಹಾ ದೀಪೋತ್ಸವ, ರಾತ್ರಿ 10-30 ಕ್ಕೆ ಭಜನಾ ಮೇಳದವರಿಂದ ಶಿವಭಜನೆ ಕಾರ್ಯಕ್ರಮ ನೆರವೇರುತ್ತವೆ ಎಂದು ಶ್ರೀ ಮಲ್ಲಿಕಾರ್ಜುನ ದೇವರ ಕಾರ್ತಿಕೋತ್ಸವ ಉತ್ಸವ ಕಮಿಟಿ ಸದಸ್ಯರು ತಿಳಿಸಿದ್ದಾರೆ.